ಕಡೂರು: ಸ್ವಗ್ರಾಮದಲ್ಲಿ ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಕಡೂರು, ಮಾ.24: ಲಕ್ನೋದಲ್ಲಿ ಮೃತಪಟ್ಟ ಯೋಧ ಮಂಜುನಾಥ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ತಾಲೂಕಿನ ಹಿರೇನಲ್ಲೂರಿನಲ್ಲಿನಡೆಯಿತು.
ಬೆಳಗ್ಗೆ ಐದರ ಸುಮಾರಿಗೆ ಮಂಜುನಾಥ್ ಅವರ ಮೃತದೇಹವನ್ನು ಹೊತ್ತ ವಾಹನ ಹಿರೇನಲ್ಲೂರಿಗೆ ಬಂದಾಗ ಅವರ ಮನೆಯಲ್ಲಿ ದುಖಃದ ಕಟ್ಟೆಯೊಡೆಯಿತು. ಅವರ ಮನೆಯಲ್ಲಿ ಒಂದು ಗಂಟೆಯ ಕಾಲ ಪಾರ್ಥಿವ ಶರೀರವನ್ನಿಡಲಾಗಿತ್ತು. ಬಂಧುಗಳು ದರ್ಶನ ಪಡೆದ ನಂತರ ಸರಕಾರಿ ಆಸ್ಪತ್ರೆಯ ಬಳಿ ನಿರ್ಮಿಸಿದ್ದ ವೇದಿಕೆಗೆ ಸ್ಥಳಾಂತರಿಸಿ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಈ ವೇಳೆ ನೂರಾರು ಗ್ರಾಮಸ್ಥರು ಸರತಿಯಲ್ಲಿ ನಿಂತು ಗೌರವ ಸಲ್ಲಿಸಿದರು.
ಮೃತ ಯೋಧನಿಗೆ ತಹಶೀಲ್ದಾರ್ ಜೆ.ಉಮೇಶ್ ತಾಲೂಕು ಆಡಳಿತದ ಪರವಾಗಿ ಪುಷ್ಪಗುಚ್ಚವಿರಿಸಿ ಗೌರವ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ನಂತರ ಸೇನಾಧಿಕಾರಿ ಮತ್ತು ಪೊಲೀಸರು ಗೌರವ ಸೂಚಿಸಿದರು.
ಮಂಜುನಾಥ್ ಅವರ ತೋಟದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
Next Story





