ಎಸ್‌ವೈಎಸ್ ಜಿಲ್ಲಾ ವೆಸ್ಟ್ ವತಿಯಿಂದ ಆತೂರ್ ಉಸ್ತಾದ್ ಅನುಸ್ಮರಣೆ

ಮಂಗಳೂರು, ಮಾ.24: ಎಸ್‌ವೈಎಸ್ ಜಿಲ್ಲಾ ವೆಸ್ಟ್ ವತಿಯಿಂದ ಸುನ್ನಿ ಅಧ್ಯಾಪಕರ ಒಕ್ಕೂಟದ ರಾಜ್ಯಾಧ್ಯಕ್ಷ ರಾಗಿದ್ದ ಆತೂರು ಸಅದ್ ಮುಸ್ಲಿಯಾರ್‌ರ ಅನುಸ್ಮರಣಾ ಕಾರ್ಯಕ್ರಮವು ನಗರದಲ್ಲಿ ಜರುಗಿತು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಬಶೀರ್ ಹಾಜಿ ಕುಂಬ್ರ, ರಾಜ್ಯ ನಾಯಕರಾದ ಹನೀಫ್ ಹಾಜಿ ಉಳ್ಳಾಲ, ಉಮರ್ ಮಾಸ್ಟರ್ ಕೋಟೆಕಾರ್, ಕೆ.ಇ. ರಝ್ವಿ ಸಾಲೆತ್ತೂರು, ಜಿಲ್ಲಾ ಉಪಾಧ್ಯಕ್ಷ ಬಾವಾ ಫಕ್ರುದ್ದೀನ್ ಕೃಷ್ಣಾಪುರ, ಜಿಲ್ಲಾ ನಾಯಕರಾದ ಇಸ್ಮಾಯಿಲ್ ಕಿನ್ಯ, ಬದ್ರುದ್ದೀನ್ ಅಝ್ಹರಿ, ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕೆಎಂ ಫಾರೂಕ್ ಕೆ.ಸಿ. ರೋಡ್ ಲುಕ್ಮಾನಿ ಉಸ್ತಾದ್, ಬಶೀರ್ ಮದನಿ ಕೂಳೂರು, ಅಬ್ದುರ್ರಝಾಕ್ ಮದನಿ, ಇಸ್ಹಾಕ್ ಝುಹ್ರಿ,ಡಿಎನ್ ಹಮೀದ್ ಮದನಿ, ಉಮರುಲ್ ಫಾರೂಕ್ ಶೇಡಿಗುರಿ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.





