ಮಾ. 25ರಿಂದ : ಉಚಿತ ಮೆಗಾ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಶಿಬಿರ
ಮಂಗಳೂರು : ಯೆನಪೋಯ ಪುಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ (ಪ.ವಿಶ್ವವಿದ್ಯಾನಿಲಯ) 'ಸ್ವಯಂ ಆರೋ ಗ್ಯದ ಮೂಲಕ ಆತ್ಮವಿಶ್ವಾಸ ಎಂಬ ವಿಷಯದ ಅಡಿಯಲ್ಲಿ ಉಚಿತ ಮೆಗಾ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಶಿಬಿರವನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ, ಪುಣೆ (ಆಯುಷ್ ಸಚಿವಾಲಯ, ಭಾರತ ಸರ್ಕಾರ)ಸಹಯೋಗದೊಂದಿಗೆ ಮಾ. 25-28ರಿಂದ ದೇರಳಕಟ್ಟೆಯ ವಿವಿಧ ಸ್ಥಳಗಳಲ್ಲಿ ಹಮ್ಮಿಕೊಂಡಿದೆ ಎಂದು ಯೆನೆಪೋಯ ಪ್ರಕ್ರತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನ ಡೀನ್ ಡಾ.ನವೀನ್ ಜಿ.ಎಚ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಪೌಷ್ಠಿಕಾಂಶದ ಸಮಾ ಲೋಚನೆ, ಸೂಜಿ ಚಿಕಿತ್ಸೆ,ಆ್ಯಕ್ಯು ಪ್ರೆಶರ್ , ಜಲಚಿಕಿತ್ಸೆ, ಮಾಲಿಶ್ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಯೋಗ ಪ್ರಾಣ ವಿದ್ಯಾ ಚಿಕಿತ್ಸೆ, ಭೌತ ಚಿಕಿತ್ಸೆ, ಯೋಗ ಚಿಕಿತ್ಸೆಯ ಜೊತೆಗೆ ರೋಗ ನಿರ್ದಿಷ್ಟ ಆಹಾರ ಪ್ರದರ್ಶನ ( ಮಾ.27 ಮತ್ತು 28ರಂದು) ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯ ಸಮಾಲೋಚನೆ ಮತ್ತು ಚಿಕಿತ್ಸಾ ಸೌಲಭ್ಯಗಳು ಇರಲಿವೆ. ಉಚಿತ (ಬಿಪಿ / ರಕ್ತದಲ್ಲಿನ ಸಕ್ಕರೆ, ಬಿ ಎಂ ಐ (ಎತ್ತರ + ತೂಕ) ಪರಿಶೀಲನೆ, ಪ್ರಕೃತಿ ಚಿಕಿತ್ಸೆಯ ಆಹಾರ ವಿತರಣೆ ಮತ್ತು ಪ್ರಕೃತಿಚಿಕಿತ್ಸಕ (ಕೋವಿಡ್) ಕೋವಿಡ್ ನಿರೋಧಕ ಕಿಟ್ ವಿತರಣೆ ಹಾಗೂ ವಿವಿಧ ಪ್ರಕ್ರತಿ ಚಿಕಿತ್ಸೆ, ಮತ್ತು ಯೋಗ ವೈದ್ಯರಿಂದ ಸೆಮಿನಾರ್, ಆರೋಗ್ಯ ಮಾತುಕತೆ ನಡೆಯಲಿದೆ.
ಈ ಶಿಬಿರದಲ್ಲಿ ಒತ್ತಡ ಮತ್ತು ಜೀವನಶೈಲಿ ಸಂಬಂಧಿತ ದೀರ್ಘಕಾಲದ ವೈದ್ಯಕೀಯ ಕಾಯಿಲೆಗಳಾದ ಅಧಿಕ ಬೊಜ್ಜು, ಮಧು ಮೇಹ, ಅರೆತಲೆನೋವು, ಉಬ್ಬಸ, ಬೆನ್ನು ಮತ್ತು ಕುತ್ತಿಗೆ ನೋವು, ಅಧಿಕ ರಕ್ತದೊತ್ತಡ, ಸೋರಿಯಾಸಿಸ್, ಆತಂಕ, ಖಿನ್ನತೆ, ನಿದ್ರಾಹೀನತೆ, ಜಠರದುರಿತ, ಮಲಬದ್ಧತೆ, ಸೈನುಟಿಸ್, ಕೆಮ್ಮು ಮತ್ತು ಶೀತ, ಧೂಳಿನ ಅಲರ್ಜಿ, ಸಯಾಟಿಕಾ, ಕಾರ್ಪಲ್ ಟನಲ್ ಸಿಂಡ್ರೋಮ್, ಸ್ಪಾಂಡಿಲೈಟೀಸ್,ಟೆನ್ನಿಸ್ ಮೊಣಕೈ,ಪ್ರೋಝೋನ್ ಶೋಲ್ಡರ್, ಮೊಡವೆ,ಹೈಫರ್, ಹೈಪೋಥೆರಾ ಯ್ಡಿಸಮ್,ಕಿಡ್ನಿ ಸ್ಟೋನ್ಸ್, ವರ್ಟಿಗೊ, ರುಮಟಾಯ್ಡಿ ಸಂಧಿವಾತ, ಪಿಸಿಒಡಿ, ಡಿಸ್ಮೆನೋರಿಯಾ,ಇತ್ಯಾದಿ ಕಾಯಿಲೆಗಳ ಚಿಕಿತ್ಸೆ ಗೆ ಪ್ರಾಮುಖ್ಯತೆ ನೀಡಲಾಗಿದೆ.
ಶಿಬಿರದ ಸ್ಮಳ ಮತ್ತು ಸಮಯದ ವೇಳಾಪಟ್ಟಿ ಹೀಗಿದೆ. ಮಾ.25-27 ಯೆನೆಪೋಯ ಆಯುಷ್ ಕ್ಯಾಂಪಸ್ ನರಿಂಗಾನ, ಬೆ.9ರಿಂದ ಸಂಜೆ 4 ರವರೆಗೆ.ಹಾಗೂ ಅದೇ ದಿನ ದೇರಳಕಟ್ಟೆ ಫುಡ್ ಕ್ರಾಪ್ಟ್ ನಲ್ಲಿಯೂ ಚಿಕಿತ್ಸೆ ನಡೆಯಲಿದೆ.
ಮಾ.28ರಂದು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ದೇರಳಕಟ್ಟೆ ಯಲ್ಲಿ ಪೂರ್ವಾಹ್ನ 9 ರಿಂದ ಅಪರಾಹ್ನ 4 ರವರೆಗೆ ಉಚಿತ ಚಿಕಿತ್ಸೆ ನಡೆಯಲಿದೆ.
ಉಚಿತ ಶಿಬಿರದ ಸೌಲಭ್ಯಗಳನ್ನು ಪಡೆಯಲು ನೋಂದಣಿ ಕಡ್ಡಾಯವಾಗಿದೆ. ನೋಂದಾ ಯಿಸಲು, 9449468558, 8494935215, 9844474460,9448790070,7259654889 ಸಂಖ್ಯೆ ಗೆ ಕರೆ ಮಾಡಬಹುದು ಎಂದು ಡಾ.ನವೀನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಿಬಿರದ ಸಂಯೋಜಕ ಡಾ.ನಾರಾಯಣ್, ಶಿಬಿರದ ಸಂಯೋಜಕ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.







