ಪಡುಬಿದ್ರಿ: ಕಬಡ್ಡಿ ರಾಜ್ಯ ತಂಡ ಪ್ರತಿನಿಧಿಸುತ್ತಿರುವ ಶೀಬಾ ಕರ್ಕೇರ

ಪಡುಬಿದ್ರಿ: ಪಡುಬಿದ್ರಿಯ ಕಾಡಿಪಟ್ಣ ನಿವಾಸಿ ಶೀಬಾ ಕರ್ಕೇರ ತೆಲಂಗಾಣದಲ್ಲಿ ನಡೆಯುತ್ತಿರುವ 47 ಜ್ಯೂನಿಯರ್ ನ್ಯಾಶನಲ್ ಕಬಡ್ಡಿ ಪಂದ್ಯಾಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತಿದ್ದಾರೆ.
ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಶೀಬಾ ಪಡುಬಿದ್ರಿಯ ಕಾಡಿಪಟ್ಣ ನಿವಾಸಿ ನಾರಾಯಣ ಕರ್ಕೇರ ಮತ್ತು ಹೀರಾವತಿ ಕರ್ಕೇರ ದಂಪತಿಯ ಪುತ್ರಿ.
ಸಾಗರ್ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಈಕೆ ಕಬಡ್ಡಿ ಪಂದ್ಯದಲ್ಲಿ ಹಲವು ಕಡೆ ಪ್ರತಿನಿಧಿಸಿದ್ದಾರೆ. ರಾಜ್ಯಮಟ್ಟದ ಕಬಡ್ಡಿ ಪಂದ್ಯದಲ್ಲಿ ಸಾಧನೆ ತೋರಿದ ಈಕೆ ಉಡುಪಿ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿ ರುವ ಏಕೈಕ ಕ್ರೀಡಾಳು.
Next Story





