ಚೆಂಬುಗುಡ್ಡೆಯಲ್ಲಿ ಯಶಸ್ವಿ ರಕ್ತದಾನ ಶಿಬಿರ

ಮಂಗಳೂರು: ಚೆಂಬುಗುಡ್ಡೆ ಫ್ರೆಂಡ್ಸ್, ಆಟೋ ಚಾಲಕರು ಮತ್ತು ಮಾಲಕರ ಸಂಘ ತೊಕ್ಕೊಟ್ಟು, ಕೆರಬೈಲ್ ಫ್ರೆಂಡ್ಸ್ ಸರ್ಕಲ್, ಮುಂಡೋಳಿ ಫ್ರೆಂಡ್ಸ್, ಅನ್ಸಾರುಲ್ ಮಸಾಕಿನ್ ಅಸೋಸಿಯೇಷನ್ ಪಿಲಾರ್, ನಿಫಾ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು.
ದೇಶಕ್ಕಾಗಿ ತನ್ನ ಪ್ರಾಣವನ್ನು ಅರ್ಪಿಸಿದಂತಹ ವೀರರಾದ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಇವರ ಸ್ಮರಣಾರ್ಥದಲ್ಲಿ ಚೆಂಬುಗುಡ್ಡೆ ನೂರುಲ್ ಹುದಾ ಮದ್ರಸ ಸಭಾಂಗಣ ಮರ್ಹೂಂ ಬಿ.ಎಂ. ಮೊಹಮ್ಮದ್ ಮದನಿ ವೇದಿಕೆಯಲ್ಲಿ ಮಂಗಳವಾರ ನಡೆಯಿತು. ಉದ್ಘಾಟನೆಯನ್ನು ಸಿದ್ದೀಕ್ ಅಹ್ಸನಿ (ಇಮಾಮರು ಚೆಂಬುಗುಡ್ಡೆ ಜುಮಾ ಮಸೀದಿ) ಇವರು ದುಆ ಮೂಲಕ ನೆರವೇರಿಸಿದರು.
ವೇದಿಕೆಯಲ್ಲಿ ಪಿ.ಸಿ ಇಮ್ತಿಯಾಜ್ ಅಧ್ಯಕ್ಷರು ಚೆಂಬುಗುಡ್ಡೆ ಜುಮಾ ಮಸೀದಿ, ದಯಾನಂದ ಪಿಲಾರ್ ಆಟೊ ಚಾಲಕ ಮತ್ತು ಮಾಲಕರ ಸಂಘ ತೊಕ್ಕೊಟ್ಟು, ವೆಂಕಟೇಶ್ ಶೆಟ್ಟಿ ನಿರೋಳಿಕೆ ತೊಕ್ಕೊಟ್ಟು ಕಾರ್ಯದರ್ಶಿ, ಅಸ್ಲಂ ಭಾಯ್ ಅಧ್ಯಕ್ಷರು ಮದನಿ ಮಸೀದಿ ಪಿಲಾರು, ಮೊಹಮ್ಮದ್ ಹನೀಫ್ ಮಾಜಿ ಅಧ್ಯಕ್ಷರು ಚೆಂಬುಗುಡ್ಡೆ ಜುಮಾ ಮಸೀದಿ, ಬಾಝಿಲ್ ಡಿಸೋಜ ಮಾಜಿ ಕೌನ್ಸಿಲರ್ ಚೆಂಬುಗುಡ್ಡೆ, ಸಜ್ಜಾದ್ ಚೆಂಬುಗುಡ್ಡೆ, ರೌಫ್ ಚೆಂಬುಗುಡ್ಡೆ, ಅಕ್ಬರ್ ಅಲಿ ಚೆಂಬುಗುಡ್ಡೆ, ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸಲಾಂ ಚೆಂಬುಗುಡ್ಡೆ, ಮುನಿರ್ ಚೆಂಬುಗುಡ್ಡೆ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರದಲ್ಲಿ 42 ರಕ್ತದಾನಿಗಳು ಸ್ವಯಂ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.






.jpeg)
.jpeg)

.jpeg)
.jpeg)
.jpeg)


