ಮಾ. 26ಕ್ಕೆ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ವಿಶ್ವ ರಂಗಭೂಮಿ ದಿನಾಚರಣೆ
ಉಡುಪಿ, ಮಾ.25: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯ ಜಂಟಿ ಆಶ್ರಯದಲ್ಲಿ ಮಾ.26ರಂದು ಸಂಜೆ 5 ಗಂಟೆಗೆ ವಿಶ್ವ ರಂಗಭೂಮಿ ದಿನಾಚರಣೆ ನಗರದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಉಡುಪಿಯ ಶಾಖೆಯಲ್ಲಿ ನಡೆಯಲಿದೆ.
ಕನ್ನಡದ ಹಿರಿಯ ರಂಗಕರ್ಮಿಗಳಾದ ಎನ್.ರಾಜಗೋಪಾಲ್ ಬಲ್ಲಾಳ್ ಉಡುಪಿ, ಲಕ್ಷ್ಮಣ್ ಕುಮಾರ್ ಮಲ್ಲೂರು ಮಂಗಳೂರು, ಅಹಲ್ಯ ಬಲ್ಲಾಳ್ ಮುಂಬೈ, ಶಶಿಕಲಾ ಜೋಶಿ ಧಾರವಾಡ ಹಾಗೂ ಗಂಗಾಧರ ಕಿದಿಯೂರು ಉಡುಪಿ ಇವರನ್ನು ಈ ಸಂದರ್ಭದಲ್ಲಿ ‘ಮಲಬಾರ್ ವಿಶ್ವರಂಗ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಗಿರ್ಮಿಟ್ ಚಲನಚಿತ್ರದ ನಾಯಕ ನಟ ಆಶ್ಲೇಷ ಭಟ್ ಇವರ ಏಕವ್ಯಕ್ತಿ ರಂಗಪ್ರಯೋಗ ‘ರಾಷ್ಟ್ರವೀರ ಎಚ್ಚಮನಾಯಕ’ ಪ್ರದರ್ಶನಗೊಳ್ಳಲಿದೆ ಎಂದು ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





