ಅರ್ಜಿ ಆಹ್ವಾನ
ಉಡುಪಿ, ಮಾ.25: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಲ್ಲಿ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಸಲಹೆಗಾರ/ಸಮಾಜ ಸೇವಕರ (ಎಂಎಸ್‌ಡಬ್ಲ್ಯೂ) -2 ಹುದ್ದೆ ಹಾಗೂ ಕಚೇರಿ ಸೇವಕರ (ಎಸೆಸೆಲ್ಸಿ) 1 ಹುದ್ದೆಗೆ ಗೌರವಧನದ ಆಧಾರದಲ್ಲಿ ಕಾರ್ಯ ನಿರ್ವಹಿಸಲು ಪುರುಷ ಹಾಗೂ ಮಹಿಳಾ ಅ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಎ.3 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಕೃಷ್ಣ ಕೃಪಾ ಕಂಪೌಂಡ್, ಉಡುಪಿ, ದೂ. ಸಂಖ್ಯೆ: 0820-2526394ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





