ಶಾಲೆಗಳಲ್ಲಿ ಸರಸ್ವತಿ, ದುರ್ಗಾ ಪೂಜೆ ನಡೆಯಬೇಕೆಂದಿದ್ದರೆ ನಮ್ಮನ್ನು ಗೆಲ್ಲಿಸಿ: ಅಮಿತ್ ಶಾ
"ದೇವಸ್ಥಾನಗಳ ನವೀಕರಣಕ್ಕೆ 100ಕೋಟಿ ರೂ. ಬಿಡುಗಡೆ ಮಾಡುತ್ತೇವೆ"

ಕೋಲ್ಕತ್ತಾ: ಪಶ್ವಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಯಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿವೆ. ಬಿಷ್ಣುಪುರದ ಬಂಕುರಾ ಎಂಬಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, "ಬಂಗಾಳದ ಶಾಲೆಗಳಲ್ಲಿ ಸರಸ್ವತಿ ದೇವಿ ಹಾಗೂ ದುರ್ಗಾ ಪೂಜೆಯನ್ನು ನಡೆಸಬೇಕೆಂದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಮತ ನೀಡಿ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
"ಬಿಷ್ಣುಪುರವು ದೇವಸ್ಥಾನಗಳ ನಾಡಾಗಿದೆ. ಇಲ್ಲಿ ಹಲವಾರು ವಿಶ್ವ ವಿಖ್ಯಾತ ದೇವಾಲಯಗಳಿವೆ. ಆದರೆ ಯಾರೂ ಈ ಕುರಿತು ಗಮನ ಹರಿಸುತ್ತಿಲ್ಲ. ಅದರ ಅಭಿವೃದ್ಧಿ ನಡೆಸುತ್ತಿಲ್ಲ. ಬಿಜೆಪಿ ಸರಕಾರವು ಬಂಗಾಳಲದಲಿ ಅಧಿಕಾರಕ್ಕೆ ಬಂದರೆ ದೇವಸ್ಥಾನಗಳ ನವೀಕರಣಕ್ಕೆಂದು 100ಕೋಟಿ ರೂ. ಬಿಡುಗಡೆ ಮಾಡುತ್ತೇವೆ" ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಪಶ್ಚಿಮ ಬಂಗಾಳ ಶಾಲೆಗಳಲ್ಲಿ ಸರಸ್ವತಿ ಪೂಜೆ ನಡೆಯಬೇಕೆ ಬೇಡವೇ? ದುರ್ಗಾ ಪೂಜೆ ನಡೆಯಬೇಕಾ ಬೇಡವೇ? ವೋಟ್ ಬ್ಯಾಂಕ್ ಗಾಗಿ ದೀದಿ ಸರಸ್ತಿ ಪೂಜೆ ಮತ್ತು ದುರ್ಗಾ ಪೂಜೆಗಳನ್ನು ನಿಲ್ಲಿಸಿದ್ದಾರೆ. ಮೇ ೨ಕ್ಕೆ ದೀದಿಗೆ ವಿದಾಯ ಹೇಳಿದ ಬಳಿಕ ದುರ್ಗಾ ಮತ್ತು ಸರಸ್ವತಿ ಪೂಜೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಅವರು ಹೇಳಿಕೆ ನೀಡಿದ್ದಾಗಿ ವರದಿಗಳು ತಿಳಿಸಿವೆ.





