Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ...

ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್: ಶಿವಮೊಗ್ಗದ ರಜತ್ ಸಾಧನೆಗೆ ಅಡ್ಡಿಯಾಗದ ಅಂಧತ್ವ

ಶರತ್ ಪುರದಾಳ್ಶರತ್ ಪುರದಾಳ್25 March 2021 10:07 PM IST
share
ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್: ಶಿವಮೊಗ್ಗದ ರಜತ್ ಸಾಧನೆಗೆ ಅಡ್ಡಿಯಾಗದ ಅಂಧತ್ವ

ಶಿವಮೊಗ್ಗ,ಮಾ.25: ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಶಿವಮೊಗ್ಗದ ಅಂಧ ವಿದ್ಯಾರ್ಥಿ ರಜತ್ ದಿಕ್ಷಿತ್ ತೋರಿಸಿಕೊಟ್ಟಿದ್ದು, ಅಂಧನಾಗಿ  ಜನಿಸಿದರೂ ಕಷ್ಟವನ್ನು ಮೆಟ್ಟಿನಿಂತು ಕುವೆಂಪು ವಿವಿ ನಡೆಸಿದ 2019-20ರ ಸ್ನಾತಕೋತ್ತರ ಪದವಿಯ ಇಂಗ್ಲಿಷ್ ಎಂ.ಎನಲ್ಲಿ ಪ್ರಥಮ ರ್‍ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯ ಮೇಲೆ ಸಾಧನೆ ಮಾಡುತ್ತಿರುವ ರಜತ್, ಶಿಕ್ಷಣ ಕಲಿಕೆ ಕಷ್ಟ ಎಂದುಕೊಳ್ಳುವವರಿಗೆ ಅಚ್ಚರಿ ಮೂಡಿಸುತ್ತಿದ್ದಾರೆ. ರಜತ್ ಅಂಧ ವಿದ್ಯಾರ್ಥಿಯಾಗಿದ್ದರಿಂದ ಅವರು ಓದು ಬ್ರೈಲ್ ಮತ್ತು ಮುದ್ರಿತ ಧ್ವನಿ ಕೇಳುವ ಮೂಲಕ ಕಲಿಯುತ್ತಿದ್ದಾರೆ.

ಬ್ರೈಲ್ ಲೈಬ್ರರಿಯಲ್ಲಿ ಆರಂಭದಲ್ಲಿ ಓದುತ್ತಿದ್ದ ರಜತ್ ಅವರು, ಬಳಿಕ ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ಕೇಳುವುದರ ಮೂಲಕ ತಮ್ಮ ಓದನ್ನು ಬೆಳಸಿಕೊಂಡಿದ್ದಾರೆ. ತನಗೆ ಬೇಕಾದ ಧ್ವನಿ ಮುದ್ರಿಕೆಯನ್ನು ನಿರ್ದಿಷ್ಟ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಓದುತ್ತಿದ್ದಾರೆ. ಕೆಲವನ್ನು ಮಾರಾಟಗಾರರು ಕಳುಹಿಸಿಕೊಡುತ್ತಾರೆ. ಇನ್ನು ಕೆಲವರು ಪ್ರೀತಿಯಿಂದ ಹಾಗೂ ಹಲವು ಲೇಖಕರು ತಾವೇ ಸಿಡಿ ತಯಾರಿಸಿ ಕಳುಹಿಸುವ ಮೂಲಕ ರಜತ್ ಓದಿಗೆ ಸಹಾಯ ಮಾಡುತ್ತಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಗರದ ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಹಾಗೂ ಪಿಯುಸಿ ಶಿಕ್ಷಣವನ್ನು ದೇಶಿಯ ವಿದ್ಯಾಶಾಲಾ ಸಂಸ್ಥೆಯಲ್ಲಿ ಪಡೆದುಕೊಂಡ ಅವರು, ಪದವಿ ಶಿಕ್ಷಣವನ್ನು ಉಜಿರೆಯಲ್ಲಿ ಪೂರ್ಣಗೊಳಿಸಿದರು. ಪದವಿಯಲ್ಲಿ ಎರಡನೇ ರ್‍ಯಾಂಕ್ ಪಡೆದುಕೊಂಡಿದ್ದರು. ನಂತರ ಸ್ನಾತಕೋತ್ತರ ಪದವಿಯನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಅಭ್ಯಸಿಸಿದ್ದಾರೆ. 'ನನ್ನ ಈ ಸಾಧನೆಗೆ ಶಿಕ್ಷಕರು, ಪ್ರೊಫೆಸರ್‌ಗಳು, ಸಹಪಾಠಿಗಳು ನೆರವಾಗಿದ್ದಾರೆ' ಎಂದು ರಜತ್ ಸ್ಮರಿಸಿದ್ದಾರೆ.

ನೀಟ್ ಪರೀಕ್ಷೆ ತೆಗೆದುಕೊಂಡಿರುವ ರಜತ್ ಗೆ ಪಿಹೆಚ್‌ಡಿ ಪೂರ್ಣಗೊಳಿಸಿ ಮುಂದೆ ಪ್ರೊಪೆಸರ್ ಆಗಬೇಕೆಂಬ ಆಸೆಯಿದೆ. 'ನಾನು ಸ್ವಂತ ಕಾಲಿನ ಮೇಲೆ ನಿಂತುಕೊಂಡು ಐಎಎಸ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂಬ ನಿರ್ಧಾರ ಮಾಡಿದ್ದೇನೆ. ಆ ದಿಕ್ಕಿನಲ್ಲಿ ಹೆಜ್ಜೆ ಇಡುತ್ತೇನೆ' ಎಂದು ವಾರ್ತಾಭಾರತಿ ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಅಪ್ಪ-ಅಮ್ಮ ಶಕ್ತಿ: ಹುಟ್ಟುವಾಗಲೇ ಕಟ್ಟಿಕೊಂಡು ಬಂದ ಅಂಧತ್ವ ಇವರ ಬದುಕಿಗೆ ಶಾಪವಾಗದಂತೆ ರಜತ್ ತಂದೆ ಮಹೇಶ್ ದಿಕ್ಷಿತ್, ತಾಯಿ ಶೀಲಾ ದಿಕ್ಷಿತ್ ನೋಡಿಕೊಂಡಿದ್ದಾರೆ. ಇವನ ಸಾಧನೆ ಹಿಂದೆ ಅಪ್ಪ-ಅಮ್ಮನ ಶ್ರಮ ಅಪಾರವಾಗಿದೆ. ಚಿಕ್ಕಂದಿನಿಂದಲೇ ಬದುಕಿನ ಗುರಿಯತ್ತ ಸ್ಪಷ್ಟ ನೋಟ ಇಟ್ಟುಕೊಂಡ ಈ ಕುಟುಂಬ ರಜತ್‌ನನ್ನು ಆ ಗುರಿಯೆಡೆಗೆ ಕೊಂಡೊಯ್ದರು. ಚಿಕ್ಕವಯಸ್ಸಿನಿಂದಲೇ ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳನ್ನು ತಾಯಿ ಶೀಲಾ ದಿಕ್ಷಿತ್ ರಜತ್‌ಗೆ ಧಾರೆಯೆರೆಯವ ಮೂಲಕ ಸಾಧನೆಗೆ ಸಾಥ್ ನೀಡಿದ್ದಾರೆ.

5 ಸಾವಿರ ಕೃತಿಗಳ ಅಧ್ಯಯನ: ರಜತ್ ಕಲಿಕೆಯೊಂದಿಗೆ ಪುಸ್ತಕ ಓದುವ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ರಜತ್ ಈವರೆಗೆ ಸುಮಾರು 5 ಸಾವಿರ ಕೃತಿಗಳನ್ನು ಓದಿದ್ದಾರೆ ಎನ್ನಲಾಗಿದೆ. ಕುವೆಂಪು, ಎಸ್.ಎಲ್ ಬೈರಪ್ಪ, ಕಾರಂತರು, ಶೇಕ್ಸ್‌ಪಿಯರ್, ಅಗಸ್ಟ್ ಕ್ಯಾಸ್ಟ್ರೋ, ಚಾರ್ಲ್ ಡಿಕೆನ್ಸ್ ಸೇರಿದಂತೆ ಹಲವಾರು ಖ್ಯಾತ ಸಾಹಿತಿಗಳ ಕೃತಿಗಳು, ಕಾದಂಬರಿಗಳನ್ನು ಓದಿದ್ದಾರೆ. ರಾಮಾಯಣ, ಮಹಾಭಾರತ, ಪತ್ತೆದಾರಿ ಕಾದಂಬರಿ, ಧನಾತ್ಮಕ ಚಿಂತನೆಯ ಪುಸ್ತಕಗಳನ್ನು ಓದಿ ಮುಗಿಸಿದ್ದಾರೆ. ನಾಟಕ, ಕಾವ್ಯ, ಕಾದಂಬರಿಗಳನ್ನು ವಿಮರ್ಶೆ ಮಾಡುವುದು ಇವರಿಗೆ ಇಷ್ಟ. ಇಂಗ್ಲಿಷ್ ಸಾಹಿತ್ಯವನ್ನು ಅಮೆರಿಕನ್ ಭಾಷಾ ಉಚ್ಚಾರದ ರೀತಿಯಲ್ಲೇ ಕೇಳುವುದು ನನಗೆ ಇಷ್ಟ ಎನ್ನುತ್ತಾರೆ ರಜತ್.

ಗಾಯಕರೂ ಹೌದು: ಶೈಕ್ಷಣಿಕ  ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಇವರು, ಉತ್ತಮ ಗಾಯಕರೂ ಆಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ರಜತ್, ಸಂಗೀತ ಗುರು ರಾಜಲಕ್ಷ್ಮಿ ಹಾಗೂ ಹೊಸಳ್ಳಿಯ ಹೆಚ್.ಅನಂತ ಅವಧಾನಿ ಯವರ ಬಳಿ ಸಂಗೀತ ಕಲಿತುಕೊಂಡಿದ್ದಾರೆ. ಈಗ ವಿದ್ವತ್ ಕಲಿಕೆ ಮಾಡುತ್ತಿದ್ದಾರೆ.

ಸಣ್ಣ ವಯಸ್ಸಿನಲ್ಲೆ ನಮ್ಮ ಮಗನಿಗೆ ಅಂಧತ್ವ ಕಾಣಿಸಿಕೊಂಡಿತ್ತು. ಮಗನಿಗೆ ಅಂಧತ್ವ ಇದೆ ಅಂತ ನಮಗೆ ಬೇಸರ ಆಗಲಿಲ್ಲ. ಅವನ ಸಾಧನೆ ಬಗ್ಗೆ ಹೆಮ್ಮೆ ಇದೆ. ಅವನು ಜೀವನವನ್ನು ನೋಡುವ ಪಾಸಿಟಿವಿಟಿ ಬಗ್ಗೆ ನಮಗೆ ತುಂಬಾ ಖುಷಿಯಾಗುತ್ತದೆ. ಅವನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದೇವೆ. ಎಂ.ಎ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದುಕೊಂಡಿರುವುದು ಸಂತೋಷವಾಗಿದೆ.
-ಶೀಲಾ ದೀಕ್ಷಿತ್, ತಾಯಿ

ಸ್ನಾತಕೋತ್ತರ ಪದವಿಯ ಇಂಗ್ಲಿಷ್ ಎಂ.ಎಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿರುವುದು ತುಂಬಾ ಖುಷಿಯಾಗಿದೆ. ತಂದೆ-ತಾಯಿ ಹಾಗೂ ಪ್ರೊಫೆಸರ್‌ಗಳ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಪುಸ್ತಕ ಓದುವುದರಲ್ಲಿ ನನಗೆ ತುಂಬಾ ಆಸಕ್ತಿ ಇದೆ. ಪಿಹೆಚ್‌ಡಿ ಪೂರ್ಣಗೊಳಿಸಿ ಪ್ರೊಫೆಸರ್ ಆಗಬೇಕು.
-ರಜತ್ ದೀಕ್ಷಿತ್, ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿ

share
ಶರತ್ ಪುರದಾಳ್
ಶರತ್ ಪುರದಾಳ್
Next Story
X