ಮಂಗಳೂರು, ಮಾ.25: ನಗರದ ಹೊರವಲಯದ ಚಿತ್ರಾಪುರ ಸಮೀಪ ಜೂಜಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರಾದ ವಿಶ್ವನಾಥ, ವಿಖ್ಯಾತ್, ನಿಶಾಂತ್, ರಿತೇಶ್ ಬಂಧಿತರು. ಆರೋಪಿಗಳಿಂದ ಜೂಜಾಟಕ್ಕೆ ಉಪಯೋಗಿಸಿದ 2,770 ರೂ. ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.