ನಟ ಮಾಧವನ್‌ಗೆ ಕೊರೋನ ಸೋಂಕು

ಹೊಸದಿಲ್ಲಿ, ಮಾ. 25: ನಟ ಮಾಧವನ್ ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ತನಗೆ ಕೊರೋನ ಸೋಂಕು ತಗುಲಿದ ಸುದ್ದಿಯನ್ನು ಸೃಜನಶೀಲವಾಗಿ ಹಂಚಿಕೊಳ್ಳಲು ಬಯಸಿದ ಮಾಧವನ್ ಅವರು ತನ್ನ ಯೋಗಕ್ಷೇಮದ ಬಗ್ಗೆ ಹೇಳುವ ಉಲ್ಲಾಸಕರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
‘ತ್ರಿ ಈಡಿಯಟ್ಸ್’ ಚಿತ್ರದಲ್ಲಿ ಆಮಿರ್‌ಖಾನ್ ಅವರೊಂದಿಗಿರುವ ಫೋಟೊವನ್ನು ಹಂಚಿಕೊಂಡಿರುವ ಅವರು ‘‘ತಾನು ಕೊರೋನದಿಂದ ಗುಣಮುಖನಾಗುತ್ತಿದ್ದೇನೆ’’ ಎಂದು ಹೇಳಿದ್ದಾರೆ.
Next Story





