ಅವಹೇಳನಕಾರಿ ಭಾಷಣ ಜಗದೀಶ್ ಕಾರಂತ, ಸಂಘಟಕರ ವಿರುದ್ಧ ದೂರು
ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಭಾಷಣಕಾರ ಜಗದೀಶ್ ಕಾರಂತ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಅವರ ಹಾಗೂ ಕಾರ್ಯಕ್ರಮ ಸಂಘಟಕರ ವಿರುದ್ದ ಕಾನೂನು ಕ್ರಮ ದಾಖಲಿಸುವಂತೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಜಗದೀಶ್ ಕಾರಂತ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸುಮೊಟೋ ಕೇಸು ದಾಖಲಿಸುವ ಅವಕಾಶವಿದ್ದರೂ ಕೇಸು ದಾಖಲಿಸದ ಅವರ ದಿವ್ಯ ಮೌನವು ಶಾಂತಿಪ್ರಿಯರಾದ ನಮಗೆ ಖೇದಕರವಾಗಿದೆ ದೂರುದಾರರು ತಿಳಿಸಿದ್ದಾರೆ.
ಕಳೆದ ಸಭೆಯಲಿ ತೀರ್ಮಾನ ಕೈಗೊಂಡಂತೆ ಎಲ್ಲಾ ಪುತ್ತೂರಿನ ಮುಸ್ಲಿಂ ಸುಮುದಾಯದ ಸಂಘ ಸಂಸ್ಥೆಯ ನಾಯಕರು, ಮಸೀದಿಯ ಅಧ್ಯಕ್ಷರು, ರಾಜಕೀಯ ನಾಯಕರು, ವಕೀಲರ ನಿಯೋಗವು ಸೇರಿಕೊಂಡು ಪುತ್ತೂರು ಉಪ ಪೊಲೀಸ್ ಅಧೀಕ್ಷಕರಿಗೆ ಜಗದೀಶ್ ಕಾರಂತ ಮತ್ತು ಕಾರ್ಯಕ್ರಮ ಸಂಘಟಕರ ಮೇಲೆ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಸಲ್ಲಿಸಲಾಗಿದೆ ಎಂದು ದ.ಕ.ಜಿಲ್ಲಾ ಯುವಜನ ಪರಿಷತ್ ಅಧ್ಯಕ್ಷ ಹಾಜಿ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.
ಈ ಸಂದರ್ಭದಲಿ ದ.ಕ.ಜಿಲ್ಲಾ ಯುವಜನ ಪರಿಷತ್ ಪ್ರಧಾನ ಕಾರ್ಯದರ್ಶಿ ಸಾಲ್ಮರ ಶರೀಫ್, ಸಂಚಾಲಕ ಮಿತ್ತೂರು ಖಾಸಿಂ ಹಾಜಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾನ್, ಕೂರ್ನಡ್ಕ ಜಮಾಅತ್ ಅಧ್ಯಕ್ಷ ಕೆ.ಎಚ್. ಖಾಸಿಂ ಹಾಜಿ, ಬನ್ನೂರು ಜಮಾಅತ್ ಅಧ್ಯಕ್ಷ ಮೊಯ್ದಿನ್ ಹಾಜಿ ಬನ್ನೂರು, ಕುಂಬ್ರ ಕೆಐಸಿ ಸಂಚಾಲಕ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ತ್ವಾಹ ಇರ್ಫಾನಿ ಉಸ್ತಾದ್ ಸಾಲ್ಮರ, ಸೀರತ್ ಕಮಿಟಿ ಅಧ್ಯಕ್ಷ ಸುರಯ್ಯ ಅಬ್ದುಲ್ ಖಾದರ್ ಹಾಜಿ, ಪಡೀಲ್ ಜುಮ್ಮಾ ಮಸೀದಿ ಅಧ್ಯಕ್ಷ ಆರ್.ಪಿ. ಅಬ್ದುಲ್ ರಝಾಕ್ ಹಾಜಿ, ಹಿರಿಯ ನೋಟರಿ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್, ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ನ್ಯಾಯವಾದಿ ಅಶ್ರಫ್ ಅಗ್ನಾಡಿ, ನ್ಯಾಯವಾದಿ ಶಾಕಿರ್ ಹಾಜಿ, ಪಿಎಫ್‍ಐ ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ, ಪರ್ಲಡ್ಕ ಮಸೀದಿ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಗೋಳಿಕಟ್ಟೆ, ಎಡಿಟಿಯು ಪುತ್ತೂರು ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಎಸ್‍ಡಿಪಿಐ ಪುತ್ತೂರು ಕಾರ್ಯದರ್ಶಿ ಅಶ್ರಫ್ ಬಾವು ಪಡೀಲ್, ಕಲ್ಲೇಗ ಮಸೀದಿ ಕಾರ್ಯದರ್ಶಿ ಹಸೈನಾರ್ ಬನಾರಿ, ಸಾಮಾಜಿಕ ಕಾರ್ಯಕರ್ತ ಅದ್ದು ಕೊಡಿಪ್ಪಾಡಿ, ಪಿಎಫ್‍ಐ ಕಬಕ ವಲಯ ಅಧ್ಯಕ್ಷ ಅಬ್ದುಲ್ ಅಝೀಝ್ ಕಬಕ, ಎಸ್‍ಕೆಎಸ್‍ಎಸ್‍ಎಫ್ ಮುಖಂಡ ಶರೀಪ್ ಮುಕ್ರಂಪಾಡಿ, ಅಬೂಬಕ್ಕರ್, ಇಬ್ರಾಹಿಂ ಪರ್ಪುಂಜ, ಸಿದ್ದೀಕ್ ಬೀಟಿಗೆ,. ಮೀಡಿಯಾ ಘಟಕದ ಅಬ್ದುಲ್ ಅಝೀಝ್ ಪಡೀಲ್ ಮತ್ತಿತರರು ಉಪಸ್ಥಿತರಿದ್ದರು.







