ಮಾ.27: ಮಂಗಳೂರು ಲಿಟ್ ಫೆಸ್ಟ್
ಮಂಗಳೂರು, ಮಾ. 25: ಎಲ್ಲ ರೀತಿಯ ಕೊರೋನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಮಾ.27ರಂದು ಮಂಗಳೂರು ಲಿಟ್ ಫೆಸ್ಟ್‌ನ ಮೂರನೇ ಆವೃತ್ತಿಯನ್ನು ನಗರದ ಕೊಡಿಯಾಲ್‌ಬೈಲ್‌ನ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಆಯೋಜಿಸಲಾಗಿದೆ.
ಕೊರೋನ ಕಾರಣದಿಂದ ಈ ಬಾರಿ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿರುವ ಈ ಲಿಟ್ ಫೆಸ್ಟ್ ‘ಭಾರತೀಯ ಆಲೋಚನೆಗಳ ಮರು ರೂಪಿಸುವಿಕೆ’ ಎಂಬ ವಿಷಯದಲ್ಲಿ ನಡೆಯಲಿದೆ. ಆಮಂತ್ರಿತ ಅತಿಥಿಗಳಷ್ಟೇ ಈ ಬಾರಿಯ ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಲಿದ್ದು, ಸುದೀರ್ಘ ವಿಚಾರ ಸಂಕಿರಣ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಾಗ್ಮಿಗಳಾಗಿ ವಿಕ್ರಂ ಸೂದ್, ಶಕ್ತಿ ಸಿನ್ಹಾ, ಪ್ರೊ.ಮಾಧವ ನಲ್ಪಾಟ್, ಮಂಗಳ ಸಿದ್ದಿ, ವಿಕ್ರಂ ಸಂಪತ್, ಶೇಶಾದ್ರಿ ಚಾರಿ, ಸುನಿಲ್ ಪುರಾಣಿಕ್, ಸುಚೇಂದ್ರ ಪ್ರಸಾದ್, ಡಾ.ಬಿ.ವಿ. ವಸಂತ್ ಕುಮಾರ್, ರೋಹಿತ್ ಚಕ್ರತೀರ್ಥ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಭಾರತೀಯ ಗ್ರಂಥಗಳಲ್ಲಿನ ಪ್ರಾಚೀನ ಐತಿಹಾಸಿಕ ದೃಷ್ಟಿಕೋನವನ್ನು ಬೌದ್ಧಿಕ ಪ್ರವಚನದ ಮೂಲಕ ಜಗತ್ತಿನಾದ್ಯಂತ ಪಸರಿಸುವ ಉದ್ದೇಶದೊಂದಿಗೆ ಈ ಲಿಟ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







