ಖ್ಯಾತ ಪತ್ರಕರ್ತ ಅನಿಲ್ ಧಾರ್ಕರ್ ನಿಧನ

ಫೋಟೊ ಕೃಪೆ: twitter.com/virsanghvi
ಹೊಸದಿಲ್ಲಿ: ಖ್ಯಾತ ಪತ್ರಕರ್ತ ಹಾಗೂ ಬರಹಗಾರ, ಮುಂಬೈ ಅಂತರ್ ರಾಷ್ಟ್ರೀಯ ಸಾಹಿತ್ಯ ಉತ್ಸವದ ಸಂಸ್ಥಾಪಕ ಅನಿಲ್ ಧಾರ್ಕರ್ ಅವರು ಶುಕ್ರವಾರ ನಿಧನರಾದರು. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಐದು ದಶಕಗಳಿಗೂ ಅಧಿಕ ಅವಧಿಯ ವೃತ್ತಿಜೀವನದಲ್ಲಿ ಧಾರ್ಕರ್ ಅವರು ಅಂಕಣಕಾರ, ಬರಹಗಾರ, ವಾಸ್ತುಶಿಲ್ಪಿ, ಚಲನಚಿತ್ರ ಸೆನ್ಸಾರ್ ಮಂಡಳಿಯ ಸಲಹಾ ಸಮಿತಿಯ ಸದಸ್ಯ ಸೇರಿದಂತೆ ಇನ್ನು ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಧಾರ್ಕರ್ ಅವರು ಮಿಡ್ ಡೇ ಹಾಗೂ ದಿ ಇಂಡಿಪೆಂಡೆಂಟ್ ಸೇರಿದಂತೆ ಹಲವಾರು ಪತ್ರಿಕೆಗಳ ಸಂಪಾದಕರಾಗಿದ್ದರು. ದಕ್ಷಿಣ ಮುಂಬೈನಲ್ಲಿ ಆಕಾಶವಾಣಿ ಸಂಭಾಗಣವನ್ನು ಕಲಾಚಿತ್ರಮಂದಿರವಾಗಿ ರೂಪುಗೊಳ್ಳಲು ಇವರು ಪ್ರಮುಖ ಪಾತ್ರವಹಿಸಿದ್ದರು.
ಧಾರ್ಕರ್ ಅವರ ಅಂಕಣಗಳು ದೇಶ ಹಾಗೂ ವಿದೇಶಗಳಲ್ಲಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು 'ದಿ ರೋಮ್ಯಾನ್ಸ್ ಆಫ್ ಸಾಲ್ಟ್' ನ ಲೇಖಕರಾಗಿದ್ದರು.
Next Story





