ಮೆಹಮೂದ್ ಪ್ರಾಚಾ ಪ್ರಕರಣ: 'ಆಕ್ಷೇಪಗಳು ಆಧಾರರಹಿತ' ಎಂದು ಸರ್ಚ್ ವಾರಂಟ್ ಜಾರಿಗೊಳಿಸಲು ಅನುಮತಿ ನೀಡಿದ ಕೋರ್ಟ್

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರದಲ್ಲಿ ಸಂತ್ರಸ್ತರಾಗಿರುವ ಹಲವರ ವಕೀಲರಾಗಿರುವ ಮೆಹಮೂದ್ ಪ್ರಾಚಾ ಅವರ ವಿರುದ್ಧ ಮಾರ್ಚ್ 4ರಂದು ಹೊರಡಿಸಲಾಗಿದ್ದ ಸರ್ಚ್ ವಾರಂಟ್ ಜಾರಿಗೆ ಅನುಮತಿ ನೀಡಿರುವ ದಿಲ್ಲಿಯ ಪಟಿಯಾಲ ಹೌಸ್ ನ್ಯಾಯಾಲಯ, ಪ್ರಾಚಾ ಅವರು ಎತ್ತಿರುವ ಆಕ್ಷೇಪಗಳು ಆಧಾರರಹಿತ ಎಂದು ಹೇಳಿದೆ.
ಸುಮಾರು 100 ಪೊಲೀಸ್ ಅಧಿಕಾರಿಗಳು ತಮ್ಮ ಕಂಪ್ಯೂಟರ್ ವಶಪಡಿಸಿಕೊಳ್ಳಲೆಂದು ತಮ್ಮ ಬಂದಿದ್ದರೆಂದು ಹೇಳಿ ಮಾರ್ಚ್ 9ರಂದು ಕೋರ್ಟ್ ಮೆಟ್ಟಿಲನ್ನು ಪ್ರಾಚಾ ಏರಿದ ನಂತರ ಈ ಪ್ರಕರಣದ ವಿಚಾರಣೆ ಮುಗಿಯುವ ತನಕ ವಾರಂಟ್‍ಗೆ ನ್ಯಾಯಾಲಯ ತಡೆಯಾಜ್ಞೆ ವಿಧಿಸಿತ್ತು.
ಆದರೆ ಮಾರ್ಚ್ 25ರಂದು ವಿಚಾರಣೆ ಪೂರ್ಣಗೊಂಡು ಪ್ರಾಚಾ ಆವರ ಅಪೀಲನ್ನು ನ್ಯಾಯಾಲಯ ಬದಿಗೆ ಸರಿಸಿರುವುದರಿಂದ ಸರ್ಚ್ ವಾರಂಟ್ ಮತ್ತೆ ಜಾರಿಗೆ ಬಂದಿದ್ದು ಪೊಲೀಸರಿಗೆ ಪ್ರಾಚಾ ಅವರ ಕಂಪ್ಯೂಟರ್ ವಶಪಡಿಸಿಕೊಳ್ಳುವ ಅಧಿಕಾರ ದೊರಕಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಪ್ರಾಚಾ ತಾವು ಇಂದು ಸೆಶನ್ಸ್ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಸರ್ಚ್ ವಾರಂಟ್ ಅನ್ನು ಮಾರ್ಚ್ 4ರಂದು ಅಕ್ರಮವಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.





