ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ಕಮಿಷನರ್‌ಗೆ ದೂರು

ಬೆಂಗಳೂರು : ಸಿ.ಡಿ. ಪ್ರಕರಣ ಸಂಬಂಧ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ಶುಕ್ರವಾರ ಮಧ್ಯಾಹ್ನ ನೀಡಲಾಗುವುದು ಎಂದು ವಕೀಲರಾದ ಕೆ.ಎನ್. ಜಗದೀಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಜಗದೀಶ್ ಕುಮಾರ್, ‘ಯುವತಿ ತಮ್ಮ ಕೈಯಿಂದ ಬರೆದಿರುವ ದೂರಿನ ಪ್ರತಿಯನ್ನು ನಮಗೆ ತಲುಪಿಸಿದ್ದಾರೆ. ಇದನ್ನು ಕಮಿಷನರ್ ಅವರಿಗೆ ನೀಡಿ, ಮುಂದಿನ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು’ ಎಂದಿದ್ದಾರೆ.
‘ಯುವತಿಗೆ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದೂ ಹೇಳಿದ್ದಾರೆ.
Next Story





