ಹಿರಾ ವಿದ್ಯಾ ಸಂಸ್ಥೆಯಲ್ಲಿ ರಮಝಾನ್ ಸ್ವಾಗತ ಕಾರ್ಯಕ್ರಮ

ಮಂಗಳೂರು : ಬಬ್ಬುಕಟ್ಟೆ ಹಿರಾ ವಿದ್ಯಾ ಸಂಸ್ಥೆಯಲ್ಲಿ ಹಿರಾ ಮಹಿಳಾ ಕಾಲೇಜು ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಹಿರಾ ಸಂಸ್ಥೆಯ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಶುಹೈಬ್ ಹುಸೈನಿ ನದ್ವಿ ರಮಝಾನ್‍ನ ಪೂರ್ವ ತಯಾರಿಯನ್ನು ಯಾವ ರೀತಿ ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ವಿವರಿಸಿದರು.
ಹಿರಾ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ದುರ್ರಹ್ಮಾನ್ ಮತ್ತು ರಹ್‍ಮತುಲ್ಲಾ, ಶಾಂತಿ ಎಜುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಅಬ್ದುಲ್ ಕರೀಮ್ ಮತ್ತು ಪ್ರಾಂಶುಪಾಲರಾದ ಭಾರತಿ ಎಂ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮರ್ಯಮ್ ರಾಹಿಝಾ ಮತ್ತು ಅಫ್‍ನಾನ್ ಅಶ್‍ವಿರಾ ಕಿರಾಅತ್ ಪಠಿಸಿದರು. ಖಾಲಿಸಾ ಸ್ವಾಗತಿಸಿದರು. ಹಲಿಮಾ ಅಫ್ರೀನ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
Next Story





