ಉಡುಪಿ: ವಸತಿ ಸಮುಚ್ಚಯದಿಂದ ಹಾರಿ ಪೆಟ್ರೋಲ್ ಬಂಕ್ ಮಾಲಕ ಆತ್ಮಹತ್ಯೆ

ಉಡುಪಿ, ಮಾ.26: ಪೆಟ್ರೋಲ್ ಬಂಕ್ ಮಾಲಕರೊಬ್ಬರು ಮೂರನೇ ಮಹಡಿಯ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಗರದ ಮಠದಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಉತ್ತಮ್ ನಾಯಕ್(30) ಎಂದು ಗುರುತಿಸಲಾಗಿದೆ. ಇವರು ಆತ್ರಾಡಿ ಸಮೀಪ ಪೆಟ್ರೋಲ್ ಬಂಕ್ ನಡೆಸುತ್ತಿದ್ದು, ನಾಲ್ಕೈದು ತಿಂಗಳ ಹಿಂದೆ ವಿವಾಹವಾಗಿದ್ದರು. ಇವರ ಪತ್ನಿ ಮುಂಬೈಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story





