Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಟಾವು ಯಂತ್ರಗಳ ಬಾಡಿಗೆ ದರ ಹೆಚ್ಚಳ:...

ಕಟಾವು ಯಂತ್ರಗಳ ಬಾಡಿಗೆ ದರ ಹೆಚ್ಚಳ: ಏಕಾಏಕಿ ದರ ಏರಿಕೆಗೆ ಆಕ್ರೋಶ

ಕರಾವಳಿಯ ಕೃಷಿಕರಿಗೆ ತಟ್ಟಿದ ತೈಲ ಬೆಲೆ ಏರಿಕೆ ಬಿಸಿ

ವಾರ್ತಾಭಾರತಿವಾರ್ತಾಭಾರತಿ26 March 2021 10:50 PM IST
share
ಕಟಾವು ಯಂತ್ರಗಳ ಬಾಡಿಗೆ ದರ ಹೆಚ್ಚಳ: ಏಕಾಏಕಿ ದರ ಏರಿಕೆಗೆ ಆಕ್ರೋಶ

ಉಡುಪಿ, ಮಾ.26: ಒಂದೆಡೆ ಕೂಲಿ ಕಾರ್ಮಿಕರ ಕೊರತೆ ಇನ್ನೊಂದೆಡೆ ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಇದೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಿಸಿ ಕೂಡ ತಟ್ಟುತ್ತಿದೆ. ಹಿಂಗಾರು ಇಳುವರಿ ಕಟಾವಿಗಾಗಿ ಯಂತ್ರಗಳಿಗೆ ಹೆಚ್ಚಿನ ಬಾಡಿಗೆ ನೀಡುವ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯಲ್ಲಿ ಈಗ ಹಿಂಗಾರು ಕೃಷಿಯ ಫಸಲು ಕಟಾವಿನ ಸಮಯ. ನಮ್ಮಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಹೆಚ್ಚಿನ ರೈತರು ಕಟಾವಿಗೆ ಯಂತ್ರದ ಮೊರೆ ಹೋಗುತ್ತಿದ್ದಾರೆ. ಕರಾವಳಿಯಲ್ಲಿ ಕೃಷಿ ಲಾಭದಾಯಕ ಅಲ್ಲ ಎಂಬ ಭಾವನೆ ಇರುವ ಮಧ್ಯೆ ತೈಲ ಬೆಲೆ ಏರಿಕೆಯ ಪರಿಣಾಮ ಕಟಾವು ಯಂತ್ರ ಗಳು ತಮ್ಮ ಬಾಡಿಗೆ ದರವನ್ನು ಹೆಚ್ಚಿಸಿಕೊಂಡಿರುವುದು ರೈತರಿಗೆ ಬಹಳ ದೊಡ್ಡ ಹೊರೆಯಾಗುತ್ತಿದೆ.

ಕಳೆದ ಹಿಂಗಾರು ಹಾಗೂ ಮುಂಗಾರಿನಲ್ಲಿ ಗಂಟೆಯೊಂದಕ್ಕೆ 2200ರೂ. ಬಾಡಿಗೆ ದರದಲ್ಲಿ ಕಟಾವು ಮಾಡಲಾಗುತ್ತಿತ್ತು. ಇದೀಗ ಆ ಯಂತ್ರದ ಬಾಡಿಗೆ 2500 ರೂ.ಗೆ ಏರಿಕೆಯಾಗಿದೆ. ಇದರಿಂದ ಎರಡು ಮೂರು ಗಂಟೆಗಳ ಅವಧಿಗೆ ಯಂತ್ರಗಳನ್ನು ಬಾಡಿಗೆ ಪಡೆದುಕೊಂಡರೆ ರೈತರು ದುಬಾರಿ ಹಣವನ್ನು ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿಕರು ಸಾವಿರಾರು ರೂ. ನಷ್ಟ ಅನುಭವಿಸುಂತಾಗುತ್ತಿದೆ.
ಖಾಸಗಿ ಯಂತ್ರಗಳ ಕಾರುಬಾರು:  ಕೃಷಿ ಇಲಾಖೆಗಿಂತ ಖಾಸಗಿ ಯಂತ್ರ ಗಳ ಕಾರುಬಾರೇ ನಮ್ಮಲ್ಲಿ ಜೋರಾಗಿ ಕಂಡುಬರುತ್ತಿದೆ. ಇದರಿಂದ ಜಿಲ್ಲೆಯ ರೈತರು ಅಂತರ್ ಜಿಲ್ಲೆಗಳ ಕಟಾವು ಯಂತ್ರಗಳನ್ನೇ ಅವಲಂಬಿಸಬೇಕಾಗಿದೆ.

ಕೃಷಿ ಇಲಾಖೆ ಅಧೀನದಲ್ಲಿ ಬೆರಳೆಣಿಕೆಯಷ್ಟೇ ಯಂತ್ರಗಳಿದ್ದು, ಹೊರ ಜಿಲ್ಲೆ, ರಾಜ್ಯದ ಯಂತ್ರಗಳನ್ನು ಅವಲಂಬಿಸುವುದು ಇಲ್ಲಿನ ರೈತರಿಗೆ ಅನಿವಾರ್ಯವಾಗಿದೆ. ಕೊರೊನಾ ಬಳಿಕ ಕೂಲಿ ಕಾರ್ಮಿಕರ ಕೊರತೆ ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದುದರಿಂದ ರೈತರು ಯಂತ್ರದ ಮಾಲಕರು ಕೇಳಿದಷ್ಟು ಬಾಡಿಗೆ ನೀಡುವ ಸ್ಥಿತಿ ತಲೆದೋರಿದೆ.

ಕಳೆದ ಕೆಲ ವರ್ಷಗಳಿಂದ ಯಂತ್ರದ ಬಾಡಿಗೆ ದರ ಏಕಾಏಕಿ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಯಂತ್ರಗಳ ಕೊರತೆಯ ನೆಪವನ್ನಾಗಿಸಿಕೊಂಡು ಯಂತ್ರಗಳಿಗೆ ಮಾಲಕರು ಬೇಡಿಕೆಯೊಡ್ಡುತ್ತಿದ್ದಾರೆ. ಹೀಗೆ ಏಕಾಏಕಿ ದರ ಹೆಚ್ಚಿಸಿ ರೈತರನ್ನು ಶೋಷಣೆ ಮಾಡುವುದನ್ನು ತಡೆಯಲು ಸರಕಾರವೇ ಬಾಡಿಗೆ ದರ ನಿಗದಿಪಡಿಸ ಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

ಹಿಂಗಾರುವಿನಲ್ಲಿ ಸುಮಾರು ಹೆಕ್ಟೇರ್‌ನಲ್ಲಿ ಭತ್ತದ ಕೃಷಿ ಆಗಿದ್ದು, ನಾಟಿ ಮಾಡಿದ 90, 110 ದಿನದೊಳಗೆ ಕಟಾವಿಗೆ ಬರುತ್ತದೆ. ಬೆಳೆದ ಭತ್ತದ ಸಲನ್ನು ಗದ್ದೆಯಲ್ಲಿ ಬಿಟ್ಟು ವಾರಗಟ್ಟಲೇ ಕಾಯುವಂತಿಲ್ಲ. ಅಲ್ಲದೇ ನೀರಿನ ಸಮಸ್ಯೆಯಿಂದಾಗಿ ಬೆರಳಣಿಕೆಯಷ್ಟೇ ರೈತರು ಕೃಷಿ ಮಾಡುತ್ತಾರೆ. ಸಣ್ಣಪುಟ್ಟ ಕೃಷಿ ಭೂಮಿಗೆ ಯಂತ್ರ ತಂದು ಕಟಾವು ಮಾಡುವುದು ಕಷ್ಟ. ಈ ತೈಲ ಬೆಲೆ ಏರಿಕೆಯಿಂದ ಯಂತ್ರಗಳ ಬಾಡಿಗೆ ಬರಿಸುವುದು ಕಷ್ಟಸಾಧ್ಯವಾಗುತ್ತಿದೆ.
-ಕರುಣಾಕರ ಶೆಟ್ಟಿ, ಹಿರಿಯ ರೈತ

ಹಿಂಗಾರು ಬೆಳೆಯಲ್ಲಿ ನಿರೀಕ್ಷಿತ ಸಲು ಸಿಗುವುದು ಕಡಿಮೆ. ಆದರೂ ಭೂಮಿ ಹಡಿಲು ಬೀಳಬಾರದೆಂಬ ಉದ್ದೇಶಕ್ಕೆ ಕೃಷಿ ಮಾಡುತ್ತಿದ್ದೇವೆ. ಹಿಂಗಾರು ಕೃಷಿಗೆ ಖರ್ಚು, ರೋಗ ಭಾದೆಯೂ ಜಾಸ್ತಿ ಇರುತ್ತದೆ. ಈ ಹಿಂಗಾರು ಕಟಾವಿನ ಸಮಯದಲ್ಲೇ ತೈಲ ಬೆಲೆ ಹೆಚ್ಚಳವಾಗಿದೆ. ಇದರ ಹೊಡೆತ ರೈತರಿಗೂ ತಟ್ಟಿದೆ. ಕಟಾವು ಯಂತ್ರ ಮಾಲೀಕರು ಪ್ರತಿ ಗಂಟೆಗೆ 300 ರೂ.ನಂತೆ ಬಾಡಿಗೆ ಹೆಚ್ಚಿಸಿದ್ದಾೆ. ಇದು ಬಹಳ ದೊಡ್ಡ ಹೊರೆಯಾಗಿದೆ.
-ನಾರಾಯಣ ಶೆಟ್ಟಿ, ಕೃಷಿಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X