'ಇಂಗ್ಲಿಷ್' ತುಳು ಚಿತ್ರದ ಬಗ್ಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಮೆಚ್ಚುಗೆ!

ಮಂಗಳೂರು, ಮಾ. 26: ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈಗ ತುಳು ಭಾಷೆ, ತುಳು ಚಲನಚಿತ್ರದ ಹಾಸ್ಯದ ಕುರಿತಂತೆಯೂ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯ ಸಂದರ್ಭ ಪತ್ರಕರ್ತರ ಜತೆ ಮಾತನಾಡುತ್ತಾ, ತಾನಿಂದು ‘ಇಂಗ್ಲಿಷ್’ ಚಲನಚಿತ್ರ ವೀಕ್ಷಿಸಲು ಹೋಗಿದ್ದಾಗಿ ಹೇಳಿದರು. ಚಲನಚಿತ್ರ ನೋಡಲು ಭಾಷೆಯ ಅಗತ್ಯವಿಲ್ಲ ಎಂಬುದು ನಾನು ಚಿತ್ರ ನೋಡಿದ ಬಳಿಕ ತಿಳಿಯಿತು. ಅರವಿಂದ ಬೋಳಾರ ಮೊದಲಾದ ಕಲಾವಿದರ ಹಾಸ್ಯ ಪಾತ್ರ ಬಹಳಷ್ಟು ಖುಷಿಯಾಯಿತು. ಪೂರ್ತಿ ಚಿತ್ರ ನೋಡಲಾಗಲಿಲ್ಲ. ರಾತ್ರಿ ಮತ್ತೆ ಪೂರ್ತಿ ಚಿತ್ರ ನೋಡುವುದಾಗಿ ಹೇಳಿದ ಅವರು, ಚಿತ್ರ ನೋಡುತ್ತಿದ್ದರೆ ಮಧ್ಯದಲ್ಲಿ ಬಿಟ್ಟು ಬರಬೇಕೆಂದು ಅನಿಸಲಿಲ್ಲ. ಉತ್ತಮವಾಗಿ ಚಿತ್ರ ಮೂಡಿಬಂದಿದೆ. ಮತ್ತೆ ಪೂರ್ಣ ಚಿತ್ರ ನೋಡಲಿದ್ದೇನೆ ಎಂದರು.
Next Story