ಚುನಾವಣಾ ಪ್ರಚಾರದ ವೇಳೆ ದೋಸೆ ತಯಾರಿಸಿದ ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್

photo: ANI
ಚೆನ್ನೈ: ತೌಸಂಡ್ ಲೈಟ್ಸ್ ಅಸೆಂಬ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಖೂಷ್ಬೂ ಸುಂದರ್ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ದೋಸೆ ತಯಾರಿ ಗಮನ ಸೆಳೆದಿದ್ದಾರೆ.
ತೌಸಂಡ್ ಲೈಟ್ಸ್ ವಿಧಾನಸಭಾ ವ್ಯಾಪ್ತಿಯ ನುಂಗಮ್ ಬಾಕ್ಕಂನ ವೆಸ್ಟ್ ಮಾಡಾ ಸ್ಟ್ರೀಟ್ ನಲ್ಲಿ ರೆಸ್ಟೋರೆಂಟ್ ವೊಂದಕ್ಕೆ ತೆರಳಿದ ಖುಷ್ಬೂ ಅವರು ತನ್ನ ಅಡುಗೆ ಕೌಶಲ್ಯವನ್ನು ತೋರಿಸಿದರು.
ಮಾಧ್ಯಮದವರ ಗಮನ ಸೆಳೆಯಲು ತಮಿಳುನಾಡಿನ ಹಲವು ಅಭ್ಯರ್ಥಿಗಳು ಚುನಾವಣಾ ಪ್ರಚಾರದ ವೇಳೆ ಅಥವಾ ನಾಮಪತ್ರ ಸಲ್ಲಿಕೆಯ ವೇಳೆ ವಿವಿಧ ರೀತಿಯ ಸೃಜನಾತ್ಮಕ ಕಲ್ಪನೆಯ ಮೊರೆ ಹೋಗಿದ್ದಾರೆ.
ಈ ಮೊದಲು ತಂಜಾವೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ವೇಳೆ ತನ್ನ ಚಿಹ್ನೆಯಾಗಿರುವ ಕಲ್ಲಂಗಡಿ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿದ್ದರು.
ಅಭ್ಯರ್ಥಿ ಹರಿ ನಾಡಾರ್ ಅಲಂಗುಲಾಮ್ ಕ್ಷೇತ್ರದಲ್ಲಿ ತನ್ನ ನಾಮಪತ್ರ ಸಲ್ಲಿಸುವಾಗ 4.25 ಕೆಜಿ ಬಂಗಾರ ಧರಿಸಿದ್ದರು.
ರೈತ ಸಂಘಟನೆಯ ಪ್ರತಿನಿಧಿ ಥಂಗ ಷಣ್ಮುಂಗಸುಂದರಂ ಅರಿಯಲೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಚುನಾವಣಾ ಠೇವಣಿ ಇಡುವಾಗ ನಾಣ್ಯಗಳು ಹಾಗೂ ಹಳೆಯ ರೂಪಾಯಿ ನೋಟುಗಳನ್ನು ಪಾವತಿಸಿದ್ದರು.
ತಮಿಳುನಾಡಿನ ವಿಧಾನಸಭಾ ಚುನಾವಣೆಯು ಎಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.







