ಕರಾಟೆ ಗ್ರೇಡಿಂಗ್ ಟೆಸ್ಟ್, ತರಬೇತಿ ಶಿಬಿರ ಕಾರ್ಯಕ್ರಮ

ಉಡುಪಿ, ಮಾ.27: ಕೊಬುಡೋ ಬುಡೋಕಾನ್ ಕರಾಟೆ ಡೋ ಅಸೋಸಿಯೇಷನ್ ಕರ್ನಾಟಕ ಹಾಗೂ ಕರಾಟೆ ಬುಡೋಕಾನ್ ಇಂಟರ್ ನೇಷನಲ್ ಇವರ ಜಂಟಿ ಆಶ್ರಯದಲ್ಲಿ ದೊಡ್ಡಣಗುಡ್ಡೆಯ ಜನತಾ ವ್ಯಾಯಾಮ ಶಾಲೆಯಲ್ಲಿ ಕರಾಟೆ ಗ್ರೇಡಿಂಗ್ ಟೆಸ್ಟ್ ಹಾಗೂ ತರಬೇತಿ ಶಿಬಿರ ಕಾರ್ಯಕ್ರಮವನ್ನು ದೊಡ್ಡಣಗುಡ್ಡೆಯ ನಗರಸಭಾ ಸದಸ್ಯ ರಾಗಿರುವ ಪ್ರಭಾಕರ ಪೂಜಾರಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಕ್ಕುಂಜೆ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕರಾಟೆ ತರಬೇತುದಾರರಾದ ಕರಾಟೆ ಬುಡೋಕಾನ್ ಮುಖ್ಯ ಶಿಕ್ಷಕ ಆಂಧ್ರ ಪ್ರದೇಶದ ಬಿ.ಪರಮೇಶ್‌ರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ರಾಮದಾಸ ಶೆಟ್ಟಿ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಕೆ.ವಿಠಲ ಗಾಣಿಗ, ಮಣಿಪಾಲದ ಶಿಟೋರಿಯಾ ಕರಾಟೆ ಇಲ್ಲಿ ಹಿರಿಯ ಕರಾಟೆ ಶಿಕ್ಷಕರಾಗಿರುವ ನಿಶಾಂತ್ ಭಟ್, ಕರಾಟೆ ಬುಡೋಕಾನ್ ಇಂಟರ್ ನೇಷನಲ್‌ನ ರಾಷ್ಟ್ರೀಯ ಮುಖ್ಯ ಶಿಕ್ಷಕರಾಗಿರುವ ಕೋಶಿ ರವಿಕುಮಾರ್ ಉದ್ಯಾವರ, ಹರ್ಷ ಭಾಗವತ್, ಸಚಿನ್ ಪಿತ್ರೋಡಿ, ಸೋಮನಾಥ ಸುವರ್ಣ, ದೀಪಕ್ ಪಿರೇರಾ ಉಪಸ್ಥಿತರಿದ್ದರು.
ಹಿರಿಯ ಕರಾಟೆ ಶಿಕ್ಷಕ ಸಂತೋಷ್ ಸುವರ್ಣ ಬೊಳ್ಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಕರ್ಕೇರ ವಂದಿಸಿದರು.








