ವ್ಯಕ್ತಿ ನಾಪತ್ತೆ
ಉಡುಪಿ, ಮಾ.27: ರಮೇಶ್ ಅಲಿಯಾಸ್ ರಾಮಪ್ಪ (45 ವರ್ಷ) ಎಂಬವರು ಮಾ.21ರಂದು ಕಟಪಾಡಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆಗೂ ಮನೆಗೆ ಹಿಂದಿರುಗಿ ಬಾರದೇ ನಾಪತ್ತೆಯಾಗಿದ್ದಾರೆ.
ಇವರು 169 ಸೆಮೀ ಎತ್ತರ, ಎಣ್ಣಕಪ್ಪು ಮೈಬಣ್ಣ, ಕೋಲುಮುಖ ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರಿಗೆ ಒಂದು ಕಣ್ಣು ಕಾಣಿಸುವುದಿಲ್ಲ ಮತ್ತು ಎಡ ಕೈ ಬಲ ಇರುವುದಿಲ್ಲ. ಈ ವ್ಯಕ್ತಿಯನ್ನು ಕಂಡವರು ಕಾಪು ಪೊಲೀಸ್ ಠಾಣೆ: ದೂ.ಸಂ.0820-2551033, ಮೊ:9480805449, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ: ದೂ.ಸಂ.0820-2520333, 9480805431ಗೆ ಮಾಹಿತಿ ನೀಡುವಂತೆ ಕಾಪು ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.
Next Story





