ಮೂಡ್ಲಕಟ್ಟೆ ಎಂಐಟಿ ಪ್ರಾದ್ಯಾಪಕರಿಗೆ ಆನ್‌ಲೈನ್ ತರಬೇತಿ ಕಾರ್ಯಾಗಾರ
ಕುಂದಾಪುರ, ಮಾ.27: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವತಿಯಿಂದ ಉಪನ್ಯಾಸಕರಿ ಗಾಗಿ ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್‌ನಲ್ಲಿ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಕುರಿತು ಐದು ದಿನಗಳ ಆನ್‌ಲೈನ್ ತರಬೇತಿ ಕಾರ್ಯಾ ಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿ ಮಣಿಪಾಲ್ ಡಾಟ್ ನೆಟ್ ಕಂಪೆನಿಯ ಸಂಶೋದನೆ ಮತ್ತು ತರಬೇತಿ ವಿಭಾಗದ ನಿರ್ದೇಶಕ ಡಾ.ಯು.ಸಿ.ನಿರಂಜನ್ ಮಾತನಾಡಿ, ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಕರು ತಮ್ಮ ಜ್ಞಾನ ಕೌಶಲ್ಯವನ್ನು ವೃದ್ದಿಗೊಳಿಸಿ ಕೊಳ್ಳುವುದು ಅವಶ್ಯಕ ಎಂದರು.
ಸುರತ್ಕಲ್ ಎನ್‌ಐಟಿಕೆ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾದ್ಯಾಪಕ ಡಾ.ಲಕ್ಷಿನಿಧಿ, ಮೂಡ್ಲಕಟ್ಟೆ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಡೀನ್ ಡಾ.ಅಬ್ದುಲ್ ಕರೀಮ್, ಮಣಿಪಾಲ ಎಂಐಟಿ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾದ್ಯಾಪಕ ಡಾ.ತನ್ವೀರ್ ಅಲಿ, ನಿಟ್ಟೆ ಎನ್.ಎಂ.ಎ.ಎಂ.ಐ.ಟಿ ನಿಟ್ಟೆ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾದ್ಯಾಪಕ ಡಾ.ಶಿವಪ್ರಕಾಶ್ ವಿಷಯದ ಬಗ್ಗೆ ತರಬೇತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಸಂಯೋಜಕ ಪ್ರೊ.ವರುಣ ಕುಮಾರ ಹಾಗೂ ಪ್ರೊ.ಸೂಕ್ಷ್ಮ ಅಡಿಗ ಕಾರ್ಯಾಗಾರವನ್ನು ನಡೆಸಿಕೊಟ್ಟರು. 20ಕ್ಕೂ ಹೆಚ್ಚು ಕಾಲೇಜಿನ ಪ್ರಾದ್ಯಾಪಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು ಎಂದು ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಬಾಲನಾಗೇಶ್ವರ ತಿಳಿಸಿದ್ದಾರೆ.







