ಶ್ರೀರಾಮ್ ಮರಾಠೆಗೆ ಡಾಕ್ಟರೇಟ್ ಪದವಿ

ಶಿರ್ವ, ಮಾ.27: ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಶ್ರೀರಾಮ್ ಪಿ.ಮರಾಠೆ, ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಐ.ಆರ್.ಮಿತ್ತಾಂತಾಯ ಮಾರ್ಗದರ್ಶನದಲ್ಲಿ ಮಂಡಿಸಿದ ಪರ್ಫಾರ್ಮೆನ್ಸ್ ಸ್ಟಡೀಸ್ ಆನ್ ಸ್ಟ್ರೆಂತ್ ಆ್ಯಂಡ್ ಡುರೇಬಿಲಿಟಿ ಆಪ್ ಆಲ್‌ಕಲಿ ಆಕ್ಟಿವೇಟೇಡ್ ಕಾಂಕ್ರಿಟ್ ಮಿಕ್ಸಸ್ ಯೂಸಿಂಗ್ ಇಂಡಸ್ಟ್ರಿಯಲ್ ಬೈ ಪ್ರೊಡೆಕ್ಸ್(ಪ್ರೊಡ್ಯೂಸಿಂಗ್ ಇಕೊ ಪ್ರೆಂಡ್ಲಿ, ಹೈ ಸ್ಟ್ರೆಂತ್ ಕಾಂಕ್ರಿಟ್ ಪಾರ್ ಹೈವೇ ಅಪ್ಲಿಕೇಶನ್) ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಹಿರಿಯ ಪತ್ರಕರ್ತ ಬಿ. ಪುಂಡಲೀಕ ಮರಾಠೆ ಶಿರ್ವ ಮತ್ತು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಶುಶ್ರೂಷಕಿ ಉಷಾ ದಂಪತಿ ಪುತ್ರ.
Next Story





