ಅತ್ಯಾಚಾರಿ ಮಾಜಿ ಸಚಿವನನ್ನು ಪಕ್ಷದಿಂದ ಉಚ್ಛಾಟಿಸಿ, ನೈತಿಕತೆ ತೋರಿ: ಕಾಂಗ್ರೆಸ್ ಆಗ್ರಹ

ಬೆಂಗಳೂರು, ಮಾ.27: ಸಂತ್ರಸ್ತೆಗೆ ರಕ್ಷಣೆ ನೀಡುವ ಬದಲಿಗೆ ಆರೋಪಿಗೆ ನೂರಾರು ಪೊಲೀಸರ ನಿಯೋಜಿಸಿ ಬಿಗಿ ಭದ್ರತೆ ನೀಡುತ್ತಿರುವ ಸರಕಾರ. ಪೊಲೀಸರನ್ನು ಕಳಿಸಬೇಕಿದ್ದಿದ್ದು ಅರೆಸ್ಟ್ ಮಾಡುವುದಕ್ಕೋ ಅಥವಾ ರಕ್ಷಣೆ ಮಾಡುವುದಕ್ಕೋ ಬಸವರಾಜ ಬೊಮ್ಮಾಯಿ ಅವರೇ? ಇದೇ ‘ಯುಪಿ ಮಾಡೆಲ್’ ಅಲ್ಲವೇ? ಈ ನವರಂಗಿ ಆಟಗಳನ್ನು ಬಿಟ್ಟು ಕೂಡಲೇ ಆರೋಪಿಯನ್ನು ಬಂಧಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಮೇಶ್ ಜಾರಕಿಹೊಳಿಯ ದೃಶ್ಯವಷ್ಟೇ ಅಶ್ಲೀಲವಲ್ಲ, ಮಾತೂ ಅಶ್ಲೀಲ. ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ’ ಮಾತುಗಳನ್ನಾಡಿದ್ದಾರೆ, ಇದು ಹೊಲಸುತನದ ಪರಮಾವಧಿ. ಅಂತಹ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ. ಬಸವರಾಜ ಬೊಮ್ಮಾಯಿ ಅವರೇ, ಕೇಸ್ ದಾಖಲಾಗಿದ್ದರೂ ಬಂಧಿಸದೇ ಇಂತ ಕೀಳು ನಾಟಕ ಆಡಲು ಬಿಟ್ಟಿದ್ದೀರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಯಾರೋ ಹೆಸರು ಹೇಳಿದ್ದಕ್ಕೆ ರಾಜೀನಾಮೆ ಕೇಳುವ ರಾಜ್ಯ ಬಿಜೆಪಿ, ಚಾಂದಿನಿ ನಾಯ್ಕ್ ರಿಗೆ ಹಲ್ಲೆ ನಡೆಸಿದ ಶಾಸಕ ಸಿದ್ದು ಸವದಿಯನ್ನು ಉಚ್ಛಾಟಿಸಿ. ತಡೆಯಾಜ್ಞೆ ತಂದಿರುವ 6 ಸಚಿವರ ರಾಜೀನಾಮೆ ಪಡೆಯಿರಿ. ಸದನ ಸದಸ್ಯರ ಚಾರಿತ್ರ್ಯ ಪ್ರಶ್ನಿಸಿದ ಸುಧಾಕರ್ ರಾಜೀನಾಮೆ ಪಡೆಯಿರಿ. ಅತ್ಯಾಚಾರಿ ಮಾಜಿ ಸಚಿವನ ಪಕ್ಷದಿಂದ ಉಚ್ಛಾಟಿಸಿ. ನೈತಿಕತೆ ತೋರಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಯಾರೋ ಹೆಸರು ಹೇಳಿದ್ದಕ್ಕೆ ರಾಜೀನಾಮೆ ಕೇಳುವ @BJP4Karnataka
— Karnataka Congress (@INCKarnataka) March 27, 2021
ಚಾಂದಿನಿ ನಾಯ್ಕ್‌ರಿಗೆ ಹಲ್ಲೆ ನಡೆಸಿದ ಶಾಸಕ ಸಿದ್ದು ಸವದಿಯನ್ನು ಉಚ್ಛಾಟಿಸಿ
ತಡೆಯಾಜ್ಞೆ ತಂದಿರುವ 6 ಸಚಿವರ ರಾಜೀನಾಮೆ ಪಡೆಯಿರಿ.
ಸದನ ಸದಸ್ಯರ ಚಾರಿತ್ರ್ಯ ಪ್ರಶ್ನಿಸಿದ ಸುಧಾಕರ್ ರಾಜೀನಾಮೆ ಪಡೆಯಿರಿ
ಅತ್ಯಾಚಾರಿ ಮಾಜಿ ಸಚಿವನ ಪಕ್ಷದಿಂದ ಉಚ್ಛಾಟಿಸಿ.
ನೈತಿಕತೆ ತೋರಿ.







