ಸ್ವಸಹಾಯ ಸಂಘಗಳಿಗೆ ಮಾರಾಟ ಮಳಿಗೆ ಹಸ್ತಾಂತರ

ಭಟ್ಕಳ: ಮಾವಳ್ಳಿ-1 ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್.ಜಿ.ವೈ.ಎಸ್ ಯೋಜನೆಯಡಿ ನಿರ್ಮಾಣಗೊಂಡಿರುವ ಸ್ವ ಸಹಾಯ ಸಂಘಗಳ ಮಾರಾಟ ಮಳಿಗೆಯನ್ನು ಆಯ್ಕೆಯಾದ ಸ್ವ ಸಹಾಯ ಸಂಘ/ಒಕ್ಕೂಟಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ, ತಾ.ಪಂ. ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ತಾ.ಪಂ. ಸದಸ್ಯರು, ಗ್ರಾ.ಪಂ.ಸದಸ್ಯರು, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ವಿನೋದ ಅನ್ವೇಕರ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ್ ಚಿಕನ್ಮನೆ, ಜಿ.ಪಂ. ಎ.ಪಿ.ಒ. ಸುರೇಶ ನಾಯ್ಕ, ನಾಗರಾಜ ಕಲ್ಮನೆ, ಪಿಡಿ.ಒ.ದಿನೇಶ ನಾಯ್ಕ, ಸಂಜೀವಿನಿ ವಲಯ ಮೇಲ್ವಿಚಾರಕ ಗೋಪಾಲ ನಾಯ್ಕ, ಸಿಬ್ಬಂದಿ, ಒಕ್ಕೂಟದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
Next Story





