'ಮದರಸ ಪಬ್ಲಿಕ್ ಪರೀಕ್ಷೆಗೆ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಬಾರದು'
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಮಸ್ತ ಆನ್ಲೈನ್ ವಿಶೇಷ ತರಗತಿಗಳು
ಮಂಗಳೂರು : 2021 ಎ. 2, 3ರಂದು ವಿದೇಶಗಳಲ್ಲಿಯೂ ಎ. 3, 4ರಂದು ಭಾರತದಲ್ಲಿಯೂ ನಡೆಯುವ ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೂ ಅವರ ಪೋಷಕರಿಗೂ ಸಮಸ್ತ ಆನ್ಲೈನ್ ಮದರಸ ಮುಖಾಂತರ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತದೆ.
ಮಾ. 28ರಂದು ಬೆಳಗ್ಗೆ 7.30ಕ್ಕೆ ಪೋಷಕರಿಗೂ ಮಾ. 29ರಂದು ಬೆಳಗ್ಗೆ 7.30 ಕ್ಕೆ ವಿದ್ಯಾರ್ಥಿಗಳಿಗೂ ಆನ್ಲೈನ್ ಕ್ಲಾಸುಗಳು ಏರ್ಪಡಿಸಲಾಗಿದೆ. ಪರೀಕ್ಷೆಯ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಹೇರುವ ರೀತಿಯ ಕೆಲವು ಪೋಷಕರ ವರ್ತನೆಗಳು ವಿರುದ್ಧ ಪರಿಣಾಮವನ್ನುಂಟು ಮಾಡುತ್ತದೆ. ಪರೀಕ್ಷಾರ್ಥಿಗಳೊಂದಿಗೆ ಪೋಷಕರ ಪಾತ್ರವನ್ನು ನಿಖರವಾಗಿ ತಿಳಿಯಲು ಸಹಾಯವಾಗುವ ರೀತಿಯಲ್ಲಿ ಶಿಕ್ಷಣ ತಜ್ಞರ ತರಗತಿಗಳು ಸಮಸ್ತ ಆನ್ಲೈನ್ ಮೂಲಕ ನಡೆಯಲಿದೆ. ಉದ್ವೇಗವಿಲ್ಲದೆ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕೆಂದು ವಿದ್ಯಾರ್ಥಿ ಗಳಿಗೆ ನಿಖರವಾಗಿ ಕಲಿಯಲು ಈ ವಿಶೇಷ ಆನ್ಲೈನ್ ತರಗತಿಯ ಮೂಲಕ ಸಾಧ್ಯವಾಗಲಿದೆ.
2020 ಜೂನ್ ಒಂದರಿಂದ ಪ್ರಾರಂಭಗೊಂಡ ಸಮಸ್ತ ಆನ್ಲೈನ್ ಮದ್ರಸಾ ತರಗತಿಗಳು ಈ ತಿಂಗಳ 29 ರಂದು ವಿದ್ಯಾರ್ಥಿಗಳಿಗಿರುವ ಮೋಟಿವೇಶನ್ ಕ್ಲಾಸ್ ನೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





