ರಾಜ್ಯದಲ್ಲಿಂದು 2,886 ಮಂದಿಗೆ ಕೋವಿಡ್ ಪಾಸಿಟಿವ್, 8 ಮಂದಿ ಸಾವು
ಬೆಂಗಳೂರಿನಲ್ಲಿ 1,820 ಮಂದಿಗೆ ಸೋಂಕು

ಬೆಂಗಳೂರು, ಮಾ. 26: ಕೋವಿಡ್ ಎರಡನೆ ಅಲೆಯ ಪರಿಣಾಮ ರಾಜ್ಯದಲ್ಲಿ ದಿನೇ ದಿನೇ ಕೊರೋನ ಆರ್ಭಟ ಹೆಚ್ಚಾಗುತ್ತಿದ್ದು, ಶನಿವಾರ ಒಟ್ಟು 2,886 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಒಟ್ಟು 1,820 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಹಾಗೂ ರಾಜ್ಯಾದ್ಯಂತ ಇಂದು 8 ಮಂದಿ ಕೋವಿಡ್‍ಗೆ ತುತ್ತಾಗಿದ್ದಾರೆ. 1,179 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
8 ಮಂದಿ ಬಲಿ: ಬೆಂಗಳೂರು ನಗರ-2, ಕಲಬುರಗಿ-2 ಹಾಗೂ ಬೀದರ್, ಧಾರವಾಡ, ಹಾಸನ ಹಾಗೂ ತುಮಕೂರಿನಲ್ಲಿ ತಲಾ ಒಂದು ಸೇರಿದಂತೆ ಒಟ್ಟು 8 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,492ಕ್ಕೆ ತಲುಪಿದೆ. ಹಾಗೂ ಕರ್ನಾಟದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 98,393ಕ್ಕೆ ತಲುಪಿದ್ದು, ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 21,252ಕ್ಕೆ ಏರಿಕೆಯಾಗಿದೆ. ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಎಷ್ಟು: ಬಾಗಲಕೋಟೆ-11, ಬಳ್ಳಾರಿ-21, ಬೆಳಗಾವಿ-16, ಬೆಂಗಳೂರು ಗ್ರಾಮಾಂತರ 58, ಬೆಂಗಳೂರು ನಗರ-1820, ಬೀದರ್-82, ಚಾಮರಾಜನಗರ-7, ಚಿಕ್ಕಬಳ್ಳಾಪುರ-10, ಚಿಕ್ಕಮಗಳೂರು-40, ಚಿತ್ರದುರ್ಗ-9, ದಕ್ಷಿಣ ಕನ್ನಡ-39, ದಾವಣಗೆರೆ-4, ಧಾರವಾಡ-41, ಗದಗ-13, ಹಾಸನ-43, ಹಾವೇರಿ-2, ಕಲಬುರಗಿ-147, ಕೊಡಗು-7, ಕೋಲಾರ-33, ಕೊಪ್ಪಳ-6, ಮಂಡ್ಯ-16, ಮೈಸೂರು-131, ರಾಯಚೂರು-10, ರಾಮನಗರ-5, ಶಿವಮೊಗ್ಗ-15, ತುಮಕೂರು-80, ಉಡುಪಿ-156, ಉತ್ತರ ಕನ್ನಡ-14, ವಿಜಯಪುರ-41, ಯಾದಗಿರಿ-9 ಪ್ರಕರಣಗಳು ಹೊಸದಾಗಿ ಕಾಣಿಸಿಕೊಂಡಿವೆ.
ರಾಜಧಾನಿಯಲ್ಲಿ 1,820 ಹೊಸ ಪ್ರಕರಣ: ರಾಜ್ಯದ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವತ್ತು 1,820 ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ ಒಟ್ಟು 4,26,169 ಕೊರೋನ ಸೋಂಕಿತರು ದೃಢಪಟ್ಟಿದ್ದು, 4,5724 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹಾಗೂ 4,06,923 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ 14,671 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.







