ಮಂಗಳೂರು, ಕೊಣಾಜೆ ಸುತ್ತಮುತ್ತ ಸಿಡಿಲು-ಮಿಂಚು ಸಹಿತ ಗಾಳಿಮಳೆ

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.28: ಮಂಗಳೂರು ನಗರ ಸೇರಿದಂತೆ ಮಂಗಳೂರು ತಾಲೂಕಿನ ಹಲವೆಡೆ ಶನಿವಾರ ತಡರಾತ್ರಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಬೇಸಿಗೆಯ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಧರೆಗೆ ಅಕಾಲಿಕ ಮಳೆ ತಂಪೆರೆದಿದೆ.
ಕೊಣಾಜೆ ಸಮೀಪದ ಹರೇಕಳ, ಪಾವೂರು, ಪಜೀರ್, ಬೋಳಿಯಾರ್, ಬೆಳ್ಮ ಗ್ರಾಮದ ಹಲವು ಕಡೆ ಶನಿವಾರ ತಡರಾತ್ರಿ ಸಿಡಿಲು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ರಾತ್ರಿ ಸುಮಾರು 12:15ರಿಂದ 1 ಗಂಟೆ ರಾತ್ರಿಯವರೆಗೆ ಮಳೆ ಸುರಿದಿದೆ. ಪರಿಸರದ ಹಲವು ಕಡೆ ಮರಗಳು ಉರುಳಿದ್ದು, ಕೊಂಬೆಗಳು ಮುರಿದುಬಿದ್ದಿವೆ. ಅಲ್ಲಲ್ಲಿ ಹಾಕಲಾದ ಕಟೌಟ್, ಬ್ಯಾನರ್ ಗಳು ನೆಲಕ್ಕುರುಳಿವೆ. ವಿದ್ಯುತ್ ಕೈಕೊಟ್ಟಿದ್ದು, ಇದರ ಪರಿಣಾಮ ನೀರಿನ ಸಮಸ್ಯೆ ಎದುರಾಗಿದೆ.
Next Story





