ಐದು ತಿಂಗಳ ಬಳಿಕ ಕೊರೋನ ದೈನಂದಿನ ಪ್ರಕರಣದಲ್ಲಿ ಭಾರೀ ಏರಿಕೆ
ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 62,714 ಹೊಸ ಕೊರೋನ ವೈರಸ್ ಕೇಸ್ ಗಳು ದಾಖಲಾಗಿದ್ದು, ಇದು ಸುಮಾರು 5 ತಿಂಗಳ ಬಳಿಕ ಕಂಡುಬಂದಿರುವ ದೈನಂದಿನ ಭಾರೀ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಹೊಸ ಸೋಂಕಿತರ ಸೇರ್ಪಡೆಯೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯು 1.19 ಕೋಟಿಗೆ ತಲುಪಿದೆ. ಸತತ 18ನೇ ದಿನ ದೇಶದಲ್ಲಿ ಕೊರೋನ ದೈನಂದಿನ ಪ್ರಕರಣದಲ್ಲಿ ಹೆಚ್ಚಳವಾಗಿದೆ.
ಈ ಹಿಂದೆ ಅಕ್ಟೋಬರ್ 16ರಂದು ಒಂದೇ ದಿನ 63,371 ಕೇಸ್ ಗಳು ದಾಖಲಾಗಿದ್ದವು.
ಒಂದೇ ದಿನದಲ್ಲಿ 312 ಮಂದಿ ಸಾವನ್ನಪ್ಪಿದು, ಇದು ಮೂರು ತಿಂಗಳಲ್ಲಿ ಗರಿಷ್ಟವಾಗಿದೆ. ಕೊರೋನದಿಂದಾಗಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,61,552ಕ್ಕೆ ಏರಿಕೆಯಾಗಿದೆ.
Next Story