"ತಮಿಳುನಾಡು ಮುಖ್ಯಮಂತ್ರಿ ಮೋದಿ, ಅಮಿತ್ ಶಾರ ಕಾಲಿಗೆ ಬೀಳುವಂತೆ ಮಾಡಿದ್ದನ್ನು ನೋಡಲಾಗುತ್ತಿಲ್ಲ"
ರಾಹುಲ್ ಗಾಂಧಿ ಹೇಳಿಕೆ

ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ವಿವಿಧ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಚೆನ್ನೈನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿಯವರನ್ನು ಮೋದಿ, ಅಮಿತ್ ಶಾ ರ ಕಾಲಿಗೆ ಬೀಳುವಂತೆ ಬಲವಂತ ಮಾಡಿದ್ದನ್ನು ಸಹಿಸಲು ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ಚೆನ್ನೈನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಚುನಾಯಿತ ಪ್ರತಿನಿಧಿಯೊಬ್ಬರು ಅಮಿತ್ ಷಾ ಅವರ ಪಾದಗಳನ್ನು ಮುಟ್ಟುವ ಚಿತ್ರವನ್ನು ನಾನು ನೋಡಿದೆ. ಬಿಜೆಪಿಯಲ್ಲಿ ಸಾಧ್ಯವಿರುವ ಏಕೈಕ ಸಂಬಂಧವೆಂದರೆ ಅಲ್ಲಿ ನೀವು ಬಿಜೆಪಿಯ ನಾಯಕನ ಪಾದಗಳನ್ನು ಮುಟ್ಟಬೇಕು, ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರ ಮುಂದೆ ತಲೆಬಾಗಿ ನಮಸ್ಕರಿಸಬೇಕು”
"ಪ್ರಧಾನಿ ತಮಿಳುನಾಡು ಸಿಎಂ ಅನ್ನು ನಿಯಂತ್ರಿಸುವುದನ್ನು ನಾನು ನೋಡಿದ್ದೇನೆ. ಮೌನವಾಗಿ ಅವರ ಪಾದಗಳನ್ನು ಮುಟ್ಟುವಂತೆ ಸನ್ನೆ ಮಾಡುವುದನ್ನು ನೋಡುತ್ತಾ ಇರಲು ಅಥವಾ ಅದನ್ನು ಸ್ವೀಕರಿಸಲು ನಾನು ಸಿದ್ಧನಲ್ಲ. ಅಮಿತ್ ಶಾ ಎದುರು ತಲೆಬಾಗಲು ತಮಿಳುನಾಡು ಸಿಎಂ ಬಯಸುವುದಿಲ್ಲ. ಆದರೆ ಅವರು ಮಾಡಿದ ಭ್ರಷ್ಟಾಚಾರದಿಂದಾಗಿ ಅವರನ್ನು ಬಲವಂತಪಡಿಸಲಾಗಿದೆ ”ಎಂದು ಚೆನ್ನೈನಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
"ಇಷ್ಟು ದೊಡ್ಡ ಭಾಷೆ ಮತ್ತು ಸಂಪ್ರದಾಯವಿರುವ ರಾಜ್ಯವಾದ ತಮಿಳುನಾಡಿನ ಸಿಎಂ ಅವರನ್ನು ಈ ರೀತಿಯಾಗಿ ಅವಮಾನಿಸುವುದನ್ನು ನಾನು ಸಹಿಸುವುದಿಲ್ಲ ಎಂದು ರಾಹುಲ್ ಹೇಳಿದರು.







