ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಉಡುಪಿ, ಮಾ.28: ಅಲೆವೂರಿನ ನೆಹರು ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಲಾದ 30 ನೇ ವರ್ಷದ ಶಾಮ ಸುಂದರಿ ಟ್ರೋಫಿ ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನು ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ವರ್ವಾಡಿ ಪ್ರಸಾದ ಶೆಟ್ಟಿ ಉದ್ಘಾಟಿಸಿದರು.
ಅಲೆವೂರು ವಿಷ್ಣುಮೂರ್ತಿ ಟ್ರಾವೆಲ್ಸ್ ಮಾಲಕ ರಾಮಚಂದ್ರ ಕೊಡಂಚ ಅದ್ಯಕ್ಷತೆ ವಹಿಸಿದ್ದರು. ಮಹಿಳಾ ಕ್ರಿಕೆಟ್ ಆಟಗಾರ್ತಿ ಏಕ್ತಾ ಪಟೇಲ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಗೌರವಾದ್ಯಕ್ಷ ಹರೀಶ್ ಕಿಣಿ, ಅದ್ಯಕ್ಷ ಗುರುರಾಜ್ ಸಾಮಗ, ಕಾರ್ಯದರ್ಶಿ ಅರುಣ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಸುಧಾ ಕರ್ ಪೂಜಾರಿ, ಜಯ ಸೇರಿಗಾರ್, ನಿತ್ಯನಂದಾ ಅಂಚನ್, ಕ್ರಿಕೆಟ್ ತಂಡದ ನಾಯಕ ಸುಧೀರ್ ಸೇರಿಗಾರ್, ಗೌರವ ಸಲಹೆಗಾರ ಮುರಳಿಧರ್ ಭಟ್, ದಿನೇಶ್ ಕಿಣಿ, ಸತೀಶ್ ಪೂಜಾರಿ, ಶೇಖರ್ ಕಲಾಪ್ರತಿಭ ಉಪಸ್ಥಿತರಿದ್ದರು.
ಪ್ರತಾಪ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಅಂಚನ್ ವಂದಿಸಿದರು. ಈ ಪಂದ್ಯಾಟದಲ್ಲಿ ಜಿಲ್ಲೆಯ 16 ತಂಡಗಳು ಭಾಗವಹಿಸಿದ್ದವು.
Next Story





