ಅಕ್ರಮ ಕಸಾಯಿಖಾನೆ ಆರೋಪ : ಓರ್ವನ ಬಂಧನ
ಕಾರ್ಕಳ, ಮಾ.28: ರೆಂಜಾಳ ಕಾಪು ಹೌಸ್ ಎಂಬಲ್ಲಿ ಮಾ.27ರಂದು ಬೆಳಗಿನ ಜಾವ ಮಾಂಸಕ್ಕಾಗಿ ಜಾನುವಾರುಗಳನ್ನು ಹಾಡಿಯಲ್ಲಿ ಕಟ್ಟಿ ಹಾಕಿದ್ದ ಆರೋಪದಲ್ಲಿ ಓರ್ವನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಯಾನೆ ಅಬ್ಬು (65) ಬಂಧಿತ ಆರೋಪಿ. ಬಂಧಿತನಿಂದ 15,000 ರೂ. ಮೌಲ್ಯದ ಒಂದು ದನ, ಎರಡು ಕರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





