ಉಳ್ಳಾಲ: ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ ಸಮಾರೋಪ

ಉಳ್ಳಾಲ : ಬ್ಯಾರಿ ಸಾಹಿತ್ಯಕ್ಕೆ ವಿವಿಧ ರೀತಿಯಲ್ಲಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಅಕಾಡೆಮಿ ನಮಗೆ ಸಿಕ್ಕಿದೆ. ಅಕಾಡೆಮಿ ಇರುವ ಕಾರಣ ದಿಂದ ಈಗ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ಇನ್ನು ತೊಕ್ಕೊಟ್ಟು ವಿನಲ್ಲಿ ಒಂದು ಭವನ ನಿರ್ಮಾಣ ಆಗಲಿಕ್ಕಿದೆ. ಇದಕ್ಕೆ ಹಣ ಕೂಡ ಬಿಡುಗಡೆ ಆಗಿದೆ. ಕಾರ್ಯಕ್ರಮ ಇಲ್ಲಿಗೆ ಮುಗಿಯುವುದಿಲ್ಲ.ಇನ್ನಷ್ಟು ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ವಹಿಸಿದ್ದ ರಹೀಂ ಉಚ್ಚಿಲ ಹೇಳಿದರು.
ಅವರು ಉಳ್ಳಾಲ ಸೆಯ್ಯದ್ ಮದನಿ ಶಾಲೆ ಯಲ್ಲಿ ಶನಿವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಮೇಲ್ಮನೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಟಿ.ಎಸ್ ಅಬ್ದುಲ್ಲಾ, ಬಿ.ಎಸ್ ಹಸನಬ್ಬ, ನಝೀರ್ ಬಾರ್ಲಿ, ಫಾತಿಮತ್ ಝೊಹರ, ಅತೀಜಮ್ಮ ಚೆಂಬುಗುಡ್ಡೆ, ಇಸ್ಮಾಯಿಲ್ ಕಣಂತೂರು, ಎಂ.ಬಿ. ಉಸ್ತಾದ್ ಮಂಜನಾಡಿ, ಶಮೀರ್ ಮುಡಿಪು, ಯು.ಬಿ.ಮುಹಮ್ಮದ್ ಹಾಜಿ ಉಚ್ಚಿಲ, ಡಾ.ಮುಖ್ತಾಫ್ ದೇರಳಕಟ್ಟೆ, ಯೂಸುಫ್ ಬಾವಾ ಬೆಳ್ಮ,ಸಿ . ಎಚ್.ಸಲಾಂ ಉಳ್ಳಾಲ, ಪಂಡಿತ್ ಮುಹಮ್ಮದ್, ಇಬ್ರಾಹಿಂ ಮುಕ್ರಿಕ ಮಂಜನಾಡಿ ಮೊದಲಾದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ದಲ್ಲಿ ತಾ.ಪಂ.ಅಧ್ಯಕ್ಶ ಮುಹಮ್ಮದ್ ಮೋನು, ಉಳ್ಳಾಲ ನಗರ ಸಭಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಮ್ಮೇಳನ ಅಧ್ಯಕ್ಷ ಆಲಿಕುಂಞಿಪಾರೆ, ಇಬ್ರಾಹಿಂ ಕೋಡಿಜಾಲ್, ಬ್ಯಾರಿ ಅಧ್ಯಯನ ಪೀಠ ದ ಸಂಯೋಜಕ ಅಬೂಬಕ್ಕರ್ ಸಿದ್ದೀಕ್, ಬ್ಯಾರಿ ಲಿಪಿ ರಚನೆ ಮತ್ತು ಸಂಶೋಧನಾ ಸಮಿತಿ ಸದಸ್ಯ ಹೈದರ್ ಅಲಿ ಕಿಲಾರಿ, ಹೈದರ್ ಪರ್ತಿಪ್ಪಾಡಿ, ಫಾರೂಕ್ ಉಳ್ಳಾಲ್, ಡಾ.ಮುನೀರ್ ಬಾವಾ ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮ್ಮೇಳನದ ಪ್ರಯುಕ್ತ ನಡೆದ ವಿಚಾರ ಗೋಷ್ಠಿಯಲ್ಲಿ ಮದನಿ ಪಿಯು ಕಾಲೇಜು ಪ್ರಾಂಶುಪಾಲ ಇಸ್ಮಾಯಿಲ್ ಟಿ ಶಿಕ್ಷಣ ಮತ್ತು ಬ್ಯಾರಿ ಮಕ್ಕಳು , ಸ್ನೇಹ ಪಬ್ಲಿಕ್ ಸ್ಕೂಲ್ ನ ಶಿಕ್ಷಕ ಅಶಿರುದ್ದೀನ್ ಸಾಮಾಜಿಕ ಜಾಲತಾಣ ಮತ್ತು ಬ್ಯಾರಿ ಗಳು,ಬಬ್ಬುಕಟ್ಟೆ ಹಿರಾ ವಿಮೆನ್ಸ್ ಕಾಲೇಜು ಉಪನ್ಯಾಸಕಿ ರುಕ್ಸಾನ ಉಮ್ಮರ್ ಕೊರೊನ ಕಾಲದ ಕುಟುಂಬ ಸಂಬಂಧ, ಲೇಖಕಿ ಮುನೀರಾ ತೊಕ್ಕೊಟ್ಟು ಮಹಿಳೆ ಮತ್ತು ಕೆಲಸ ಕಾರ್ಯ ಎಂಬ ವಿಷಯದ ಬಗೆ ವಿಚಾರ ಮಂಡನೆ ಮಾಡಿದರು.
ಕಾರ್ಯಕ್ರಮ ದ ಪ್ರಯುಕ್ತ ಕವಿಗೋಷ್ಠಿ, ಮೆಹಂದಿ, ಅಡುಗೆ,ಭಾಷಣ ಸ್ಪರ್ಧೆ ನಡೆಯಿತು. ಕವಿಗೋಷ್ಠಿಯ ಲ್ಲಿ ನಾಸೀರ್ ಸಜಿಪ, ಹಮೀದ್ ಹಸನ್ ಮಾಡೂರು, ರಫೀಕ್ ಕಲ್ಕಟ್ಟ,ಶ ಅದ್ ಸಜಿಪನಡು,ನಿಜಾಂ ಗೋಳಿಪಡ್ಪು, ಮುತ್ತಲಿಬ್ ಕಿನ್ಯ, ಶಮೀಮ ಕುತ್ತಾರ್,ಶಿಹಾನ, ಶಿಫಾ ಕೆ.ಉಳ್ಳಾಲ, ರೈಹಾನ, ಸಾರಾ ಮುಸ್ಕುರುನ್ನಿಸಾ ಭಾಗವಹಿಸಿದ್ದರು. ಬಶೀರ್ ಅಹ್ಮದ್ ಕಿನ್ಯ ಅವರ ನೇತೃತ್ವದಲ್ಲಿ ಬ್ಯಾರಿ ಹಾಡು ಕಾರ್ಯಕ್ರಮ ನಡೆಯಿತು. ಮೆಹಂದಿ, ಅಡುಗೆ,ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.







