ವಿರೋಧಿಗಳು ಹೆಚ್ಚಾದಷ್ಟು ನೀವು ಮೂರ್ತಿ ಆಗಿದ್ದೀರಿ ಎಂದರ್ಥ: ಶ್ರೀ ಬಾಲ ಆಚಾರ್ಯ ಸಿದ್ಧಸೇನಮುನಿ ಮಹಾರಾಜ್
ನೀವು ಸಿಎಂ ಆಗ್ತೀರಿ ಎಂದು ಡಿಕೆಶಿಗೆ ಆಶೀರ್ವಾದ
ಬೆಳಗಾವಿ, ಮಾ. 28: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರವಿವಾರ ಇಲ್ಲಿನ ಹಗಲಮಠದ ಶ್ರೀ ಬಾಲ ಆಚಾರ್ಯ ಸಿದ್ಧಸೇನಮುನಿ ಮಹಾರಾಜ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ರವಿವಾರ ಸಂಜೆ ಶ್ರೀಗಳನ್ನು ಭೇಟಿ ಮಾಡಿದ ಶಿವಕುಮಾರ್ ಅವರು ಕೆಲಕಾಲ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಾಲ ಆಚಾರ್ಯ ಸಿದ್ಧಸೇನಮುನಿ ಮಹಾರಾಜ್ ಅವರು, ಡಿ.ಕೆ.ಶಿವಕುಮಾರ್ ಎಂದರೆ ಕನಕಪುರದ ಬಂಡೆ ಇದ್ದಂತೆ. ಬಂಡೆ ಅಂದರೆ ಕಲ್ಲು, ಕಲ್ಲು ಕಡೆದು, ಕಡೆದು ಮೂರ್ತಿಯಾದಂತೆ ನಿಮಗೆ ವಿರೋಧಿಗಳು ಹೆಚ್ಚಾದಷ್ಟು ನೀವು ಮೂರ್ತಿ ಆಗಿದ್ದೀರಿ ಎಂಬುದು ಸಂಕೇತ. ಹೀಗಾಗಿ ನೀವು ಮುಖ್ಯಮಂತ್ರಿ ಆಗುತ್ತೀರಿ' ಎಂದು ಆಶೀರ್ವಚನ ನೀಡಿದರು.
Next Story





