ಮೈಸೂರು: ಪೊಲೀಸರ ಮೇಲೆ ಹಲ್ಲೆ ಪ್ರಕರಣ; ಮತ್ತೆ ಇಬ್ಬರ ಬಂಧನ

ಮೈಸೂರು,ಮಾ.28: ನಗರದ ರಿಂಗ್ ರೋಡ್ ಬಳಿಯ ಆರ್‍ಎಂಪಿ ವೃತ್ತದಲ್ಲಿ ಮಾ.22ರಂದು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರತ ಪೊಲೀಸರ ಮೇಲಿನ ಹಲ್ಲೆ ಸಂಬಂಧ ಇನ್ನೂ ಇಬ್ಬರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಮೇಟಗಳ್ಳಿಯ ಬಾಬು ಅಲಿಯಾಸ್ ಜಿಲೇಬಿ, ಸರಸ್ವತಿಪುರಂನ ರಮೇಶ್ ಬಂಧಿತರು. ವಿಡಿಯೋ ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಸುಮಾರು 18 ಮಂದಿಯನ್ನು ಗುರುತಿಸಿದ್ದರು. ಈ ಪೈಕಿ 13 ಮಂದಿಯನ್ನು ಈ ಮೊದಲೇ ಬಂಧಿಸಲಾಗಿತ್ತು. ಈಗ ಇಬ್ಬರ ಬಂಧನ ಸೇರಿ ಒಟ್ಟು 15 ಮಂದಿಯನ್ನು ಬಂಧಿಸಿದಂತಾಗಿದ್ದು, ಇನ್ನು ಮೂವರಿಗಾಗಿ ಶೋಧ ನಡೆದಿದೆ.
Next Story





