ಗುರುಗಾಂವ್-ದ್ವಾರಕಾ ಎಕ್ಸ್‌ಪ್ರೆಸ್ ವೇ ಕುಸಿತ: ಮೂವರು ಕಾರ್ಮಿಕರಿಗೆ ಗಾಯ

ಗುರುಗಾಂವ್, ಮಾ. 28: ಗುರುಗಾಂವ್‌ನ ನಿರ್ಮಾಣ ಹಂತದಲ್ಲಿರುವ ದ್ವಾರಕಾ ಎಕ್ಸ್‌ಪ್ರೆಸ್ ಹೈವೇಯ ಎತ್ತರಿಸಲಾದ ಭಾಗ ರವಿವಾರ ಬೆಳಗ್ಗೆ ಕುಸಿದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಇದು ಕುಸಿಯಲು ಕಾರಣವಾದ ಅಂಶಗಳು ಇನ್ನಷ್ಟೇ ತಿಳಿಯಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ದೌಲತ್‌ಬಾಗ್ ಚೌಕ್‌ನ ಸಮೀಪ ಇರುವ ಎತ್ತರಿಸಲಾದ ಭಾಗ ಕುಸಿದು ಬಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ದುರಂತ ನಡೆಯುವ ಸಂದರ್ಭ ನಿವೇಶನದಲ್ಲಿ ಕೆಲಸ ನಡೆಯುತ್ತಿರಲಿಲ್ಲ’’ ಎಂದು ದ್ವಾರಕಾ ಎಕ್ಸ್‌ಪ್ರೆಸ್ ಹೈವೇಯ ಯೋಜನಾ ನಿರ್ದೇಶಕ ನಿರ್ಮಾನ್ ಜಂಬುಲ್ಕರ್ ತಿಳಿಸಿದ್ದಾರೆ.
Next Story





