ಅಕ್ರಮ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಆರೋಪ: ವಾಹನ, ಸೊತ್ತು ವಶ
ಮಂಗಳೂರು, ಮಾ.29: ಸುರತ್ಕಲ್ ಗ್ರಾಮದ ಮುಕ್ಕದಲ್ಲಿ ಅಕ್ರಮವಾಗಿ ಟಾಟಾ ಟೆಂಪೊದಲ್ಲಿ ಪರವಾನಿಗೆ ರಹಿತ ಮಿಶ್ರ ಜಾತಿಯ ಕಟ್ಟಿಗೆಗಳನ್ನು ಸಾಗಾಟ ಮಾಡಿರುವ ಪ್ರಕರಣವನ್ನು ಅರಣ್ಯ ಅಧಿಕಾರಿಗಳು ಸೋಮವಾರ ಪತ್ತೆ ಹಚ್ಚಿದ್ದಾರೆ.
ಸೊತ್ತುಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ವಾಹನ ಚಾಲಕ ಸರ್ಫರಾಜ್‌ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್‌ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೃಷ್ಣ, ವಿನಯ್ ಕುಮಾರ್, ಸೋಮನಗೌಡ ಪಾಟೀಲ್, ಮೋಹನ ಹಾಗೂ ಚಾಲಕ ಸುನೀಲ್ ಬಿ.ಸಿ ಪಾಲ್ಗೊಂಡಿದ್ದಾರೆ.
Next Story





