‘ನೂಲ್‌ಮೊಲಿ’ ಬ್ಯಾರಿ ವಚನ ಸಾಹಿತ್ಯ ಕೃತಿ ಬಿಡುಗಡೆ

ಮಂಗಳೂರು, ಮಾ. 29: ಹಿರಿಯ ಸಾಹಿತಿ ಪ್ರೊ.ಬಿ.ಎಂ.ಇಚ್ಲಂಗೋಡು ರಚಿಸಿದ ಮೂಡುಬಿದಿರೆಯ ಕನ್ನಡ ಸಂಘ ಪ್ರಕಟಿಸಿದ ‘ನೂಲ್‌ಮೊಲಿ’ (ಬ್ಯಾರಿ ಚೊಲ್ತುರೊ ಬೂಕು) ಎಂಬ ಬ್ಯಾರಿ ವಚನ ಸಾಹಿತ್ಯ ಕೃತಿಯ ಬಿಡುಗಡೆ ಕಾರ್ಯಕ್ರಮವು ನಗರದ ಮಂಗಳೂರು ಗ್ರಾಹಕರ ಜಾಗೃತಿ ವೇದಿಕೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಇಂಜಿನಿಯರ್ ಮುಸ್ತಫಾ ಕೃತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭ ಕೃತಿಕಾರ ಪ್ರೊ.ಬಿಎಂ ಇಚ್ಲಂಗೋಡು, ಕನ್ನಡ ಸಂಘದ ಕಾರ್ಯದರ್ಶಿ ಬಿ.ಜೀವನ್, ಹಾರಿಸ್ ಮತ್ತಿತರರು ಉಪಸ್ಥಿತರಿದ್ದರು.
Next Story





