ಬಿಹಾರ: ಹೋಳಿ ದಹನದ ಸಂದರ್ಭ ಬೆಂಕಿ ತಗುಲಿ ಮೂವರು ಮಕ್ಕಳು ಸಾವು

ಸಾಂದರ್ಭಿಕ ಚಿತ್ರ
ಬೋಧ್ಗಯಾ, ಮಾ. 29: ಹೋಲಿ ದಹನದ ಸಂದರ್ಭ ಬೆಂಕಿ ತಗುಲಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ಬಿಹಾರದ ಬೋಧ್ಗಯಾದಲ್ಲಿ ರವಿವಾರ ನಡೆದಿದೆ.
ಹೋಳಿಯ ಮುನ್ನಾ ದಿನ ಈ ಮಕ್ಕಳು ಹೋಳಿ ಕಟ್ಟಿಗೆಯ ಮೇಲೆ ಹುಲ್ಲು ಹಾಕಿ ಸುಡುತ್ತಿದ್ದ ಗುಂಪಿನ ಭಾಗವಾಗಿದ್ದರು. ಈ ಸಂದರ್ಭ ಬೆಂಕಿ ತಗುಲಿ ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರು. ಓರ್ವ ಬಾಲಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಹೋಳಿ ದಹನದ ಸಂದರ್ಭ ಉರಿಯುತ್ತಿರುವ ಹುಲ್ಲು ತುಂಡು ಸುತ್ತಮುತ್ತಲಿನ ಪ್ರದೇಶದ ಒಣ ಹುಲ್ಲಿನ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿತ್ತು. ಅದು ಕೂಡಲೇ ವ್ಯಾಪಿಸಿತು. ಇದರಲ್ಲಿ ಸಿಲುಕಿ ಮಕ್ಕಳು ಸಾವನ್ನಪ್ಪಿದರು ಎಂದು ಮೂಲಗಳು ತಿಳಿಸಿವೆ. ಮಕ್ಕಳ ಹೆತ್ತವರು ಯಾರ ವಿರುದ್ಧವೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಅವರು ಮಕ್ಕಳ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





