ಭಾರೀ ಮಳೆ : ಎಸ್ಡಿಪಿಐ ವಾಮಂಜೂರು ಸದಸ್ಯರಿಂದ ರಕ್ಷಣಾ ಕಾರ್ಯ

ಮಂಗಳೂರು : ಸೋಮವಾರ ರಾತ್ರಿ ಸುರಿದ ಮಳೆಯಲ್ಲಿ ಹಲವು ಕಡೆಗಳಲ್ಲಿ ಮನೆ ಹಾಗೂ ಮರಗಳು ಧರೆಗೆ ಉರುಳಿದ್ದು, ವಾಮಂಜೂರಿನ ಮುತ್ತೊಟ್ ಫೈನಾನ್ಸ್ ಎದುರುಗಡೆ ಇರುವ ಬೃಹತ್ ಗಾತ್ರದ ಮರವೊಂದು ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಕೆಲ ಸಮಯಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ತಕ್ಷಣ ಈ ಬಗ್ಗೆ ಮಾಹಿತಿ ಅರಿತ ಎಸ್ಡಿಪಿಐ ವಾಮಂಜೂರು ತಂಡದ ಸದಸ್ಯರು ಸ್ಥಳಕ್ಕೆ ಆಗಮಿಸಿ ತಮ್ಮ ಪ್ರಾಣದ ಹಂಗು ತೊರೆದು ಮರವನ್ನು ತೆರವು ಗೊಳಿಸಲು ಯಶಸ್ವಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನರಿಕೊಂಬು ಗ್ರಾಮದ ನಾಯಿಲ ಬೋರುಗುಡ್ಡೆ ಎಂಬಲ್ಲಿ ಭಾರೀ ಮಳೆಗೆ ಮರ ಬಿದ್ದು ಭೋಜ ಕುಲಾಲ್, ಕೃಷ್ಣಪ್ಪ ಪೂಜಾರಿ, ವಿಶ್ವನಾಥ ಪೂಜಾರಿ ಹಾಗೂ ಅರುಣ್ ಕುಲಾಲ್ ಎಂಬವರ ಮನೆಗಳಿಗೆ ಹಾನಿಯಾಗಿದೆ.








.jpeg)


