ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಎಂ.ಸಿ.ಅಬ್ದುಲ್ ರಹಿಮಾನ್ ಆಯ್ಕೆ

ಉಳ್ಳಾಲ : ಬೆಂಗಳೂರಿನ ದೇವನಹಳ್ಳಿಯ ವಿದ್ಯಾನಗರ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಗೇಮ್ಸ್ ಎಸೋಸಿಯೇಶನ್ ವತಿಯಿಂದ ಎರಡನೇ ಬಾರಿ ನಡೆದ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟ ದಲ್ಲಿ ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿ ಎಂ.ಸಿ.ಅಬ್ದುಲ್ ರಹಿಮಾನ್ 100 ಮೀಟರ್ ಮತ್ತು 200ಮೀಟರ್ ಓಟಗಳಲ್ಲಿ ಚಿನ್ನ ಪದಕ ಹಾಗೂ 100X400 ಮಿಶ್ರ ರಿಲೇ ಯಲ್ಲಿಯೂ ಚಿನ್ನದ ಪದಕ ವಿಜೇತರಾಗಿದ್ದು, ಅವರು ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಆಗಿದ್ದಾರೆ.
Next Story





