ಉಡುಪಿಯ ಭೂ ಸೇನಾ ನೇಮಕಾತಿ ರ್ಯಾಲಿ; ಅರ್ಜಿ ಸಲ್ಲಿಸಿದ್ದ 38,818ರಲ್ಲಿ 22,532 ಅಭ್ಯರ್ಥಿಗಳು ಭಾಗಿ: ಕರ್ನಲ್ ದುಭಾಶ್

ಉಡುಪಿ, ಮಾ.30: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 10 ದಿನಗಳ ಕಾಲ ಹಮ್ಮಿಕೊಳ್ಳಲಾದ ಭೂ ಸೇನಾ ನೇಮಕಾತಿ ರ್ಯಾಲಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 22,532 ಅಭ್ಯರ್ಥಿಗಳು ಭಾಗವಹಿಸಿದ್ದು, ದೈಹಿಕ ಹಾಗೂ ಮೆಡಿಕಲ್ ಪರೀಕ್ಷೆ ಈಗಾಗಲೇ ಉತ್ತೀರ್ಣಗೊಂಡ ಅಭ್ಯರ್ಥಿಗಳು ಮೇ 30ರಂದು ಲಿಖಿತ ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ಬೆಟಾಲಿಯನ್ ಮಂಗಳೂರು ವಲಯದ ಸೇನಾ ನೇಮ ಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ದುಭಾಶ್ ತಿಳಿಸಿದ್ದಾರೆ.
ಅಜ್ಜರಕಾಡು ಕ್ರೀಡಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ಎಪ್ರಿಲ್ ತಿಂಗಳಿನಲ್ಲಿ ನಡೆಯ ಬೇಕಾಗಿದ್ದ ನೇಮಕಾತಿ ರ್ಯಾಲಿಯು ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿತ್ತು. ಈ ರ್ಯಾಲಿಗೆ ರಾಜ್ಯದಿಂದ ಒಟ್ಟು 38,818 ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 16,286 ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿ ದ್ದಾರೆ. ಲಿಖಿತ ಪರೀಕ್ಷೆಯ ಬಳಿಕ ಜೂನ್ ತಿಂಗಳಲ್ಲಿ ಮೇರಿಟ್ ಪಟ್ಟಿ ಪ್ರಕಟಿಸಿ, ಆಯ್ಕೆಯಾದವರನ್ನು ನಿಗದಿತ ಸೇನಾ ತರಬೇತಿ ಕೇಂದ್ರಗಳಿಗೆ ಕಳುಹಿಸಲಾಗು ವುದು ಎಂದರು.
ಕೇವಲ 2000 ಅಭ್ಯರ್ಥಿಗಳು
ನೇಮಕಾತಿ ರ್ಯಾಲಿಯಲ್ಲಿ ಮೊದಲ ದಿನ ಉಡುಪಿ, ದ.ಕ., ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಿಂದ 2,000 ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿ ದ್ದರು. ಅವರಲ್ಲಿ ಹೆಚ್ಚಿನವರು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲಾಡಳಿತದ ಮೂಲಕ ಅಗತ್ಯವಿರುವ ಸಹಕಾರವನ್ನು ನೇಮಕಾತಿ ರ್ಯಾಲಿ ನೀಡಲಾಗಿದ್ದು, ರ್ಯಾಲಿ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅರ್ಜಿಗಳು ಬರುವ ಜಿಲ್ಲೆಗಳಲ್ಲಿಯೇ ನೇಮಕಾತಿ ರ್ಯಾಲಿ ಮಾಡಿದರೆ ಉತ್ತಮ ಎಂಬುದು ನಮ್ಮ ಮನವಿಯಾಗಿದೆ. ದೂರದ ಊರುಗಳಿಂದ ಬಂದು ರ್ಯಾಲಿ ಯಲ್ಲಿ ಪಾಲ್ಗೊಳ್ಳುವುದು ತುಂಬಾ ಕಷ್ಟದ ಕೆಲಸ ಆಗಿದೆ. ನಮ್ಮ ಮಕ್ಕಳಿಗೆ ಸೇನೆ ಸೇರಲು ಸ್ಪೂರ್ತಿ ಬರಲಿ ಎಂಬ ಉದ್ದೇಶದಿಂದ ಈ ರ್ಯಾಲಿಯನ್ನು ಇಲ್ಲಿ ಆಯೋಜಿಸಲಾಗಿದೆ ಎಂದರು.
ನೇಮಕಾತಿ ರ್ಯಾಲಿ ಸಂದರ್ಭದಲ್ಲಿ ಜಿಲ್ಲಾಡಳಿತ ಅಥವಾ ಇತರ ಸಂಸ್ಥೆಗಳು ಅಭ್ಯರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡುವುದಿಲ್ಲ. ಆದರೂ ಜಿಲ್ಲಾಡಳಿತ ದಾನಿಗಳ ನೆರವಿನೊಂದಿಗೆ ವಸತಿ ಮತ್ತು ಊಟ, ಉಪಹಾರ ವ್ಯವಸ್ಥೆ ಮಾಡ ಲಾಗಿತ್ತು. ನೇಮಕಾತಿ ರ್ಯಾಲಿ ಬೆಳಗಿನ ಜಾವ 4ಗಂಟೆ ನಡೆಯುವುದರಿಂದ ಸಾಕಷ್ಟು ಮಂದಿ ಮಧ್ಯರಾತ್ರಿಯಲ್ಲೇ ಉಡುಪಿಗೆ ಬರುತ್ತಿದ್ದರು. ಹಾಗಾಗಿ ಅವರೆಲ್ಲ ಸಿಕ್ಕಿದ ಜಾಗದಲ್ಲಿ ಮಲಗುತ್ತಿ ದ್ದರು. ಇದೇ ಫೋಟೋ ಇಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತ್ದ ವಿರುದ್ಧ ಅಪಪ್ರಚಾರ ನೆಸಿದ್ದಾರೆ ಎಂದು ಅವರು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ, ಉಡುಪಿ ಕ್ರೀಡೆ ಮತ್ತು ಯುವಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟಿ್ಟ ಉಪಸ್ಥಿತರಿದ್ದರು.
ಶೇ.10ರಷ್ಟು ನಕಲಿ ದಾಖಲೆ!
10 ದಿನಗಳ ನೇಮಕಾತಿ ರ್ಯಾಲಿಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಶೇ.10ರಷ್ಟು ಅಭ್ಯರ್ಥಿಗಳು ನಕಲಿ ಅಂಕ ಪಟ್ಟಿ ಹಾಗೂ ಕ್ರೀಡಾ ಪ್ರಮಾಣ ಪತ್ರ ಹಾಜರು ಪಡಿಸಿದ್ದು, ಅವರನ್ನು ರ್ಯಾಲಿಯಿಂದ ವಜಾಗೊಳಿಸಿ ಹೊರ ಕಳುಹಿಸಲಾಗಿದೆ. ಇವರಲ್ಲಿ ಹೊರ ಜಿಲ್ಲೆ ಯವರೇ ಹೆಚ್ಚು ಎಂದು ಉಡುಪಿ ಕ್ರೀಡೆ ಮತ್ತು ಯುವಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೆಶನ್ ಕುಮಾರ್ ಶೆಟ್ಟಿ ತಿಳಿಸಿದರು.







