Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ʼಬಾಂಗ್ಲಾ ವಿಮೋಚನೆ ಹೋರಾಟದಲ್ಲಿ...

ʼಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದ ಮಹಿಳೆಯರುʼ ಎಂದು ನಕಲಿ ಫೋಟೊ ಪ್ರಕಟಿಸಿದ ಪೋಸ್ಟ್‌ ಕಾರ್ಡ್‌ ಸ್ಥಾಪಕ

ನಗೆಪಾಟಲಿಗೀಡಾದ ಮಹೇಶ್‌ ವಿಕ್ರಂ ಹೆಗ್ಡೆ

ವಾರ್ತಾಭಾರತಿವಾರ್ತಾಭಾರತಿ30 March 2021 8:09 PM IST
share
ʼಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದ ಮಹಿಳೆಯರುʼ ಎಂದು ನಕಲಿ ಫೋಟೊ ಪ್ರಕಟಿಸಿದ ಪೋಸ್ಟ್‌ ಕಾರ್ಡ್‌ ಸ್ಥಾಪಕ

ಬೆಂಗಳೂರು: ಬಾಂಗ್ಲಾ ದೇಶ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದ ಮಹಿಳೆಯರು ಎಂದು ನಕಲಿ ಫೋಟೊವೊಂದನ್ನು ಪ್ರಕಟಿಸಿ ಸಂಪೂರ್ಣ ವಿಷಯವನ್ನೇ ಕೋಮುವಾದೀಕರಣಗೊಳಿಸಿದ್ದ ಪೋಸ್ಟ್‌ ಕಾರ್ಡ್‌ ಮತ್ತು ಅದರ ಸ್ಥಾಪಕ ಮಹೇಶ್‌ ವಿಕ್ರಮ್‌ ಹೆಗ್ಡೆ ಸದ್ಯ ನಗೆಪಾಟಲಿಗೀಡಾಗಿದ್ದಾರೆ.

ನಾಲ್ವರು ಮಹಿಳೆಯರು ಕಾರಿನಲ್ಲಿ ಕುಳಿತ ಹಳೆಯ ಫೋಟೊವನ್ನು ಪ್ರಕಟಿಸಿ "ಇದು ಬಾಂಗ್ಲಾ ದೇಶದ ಚಿತ್ರವಾಗಿದ್ದು, ಈ ಚಿತ್ರದಲ್ಲಿರುವ ನಾಲ್ವರ ಹಣೆಯಲ್ಲೂ ಕುಂಕುಮ ಕಾಣಬಹುದಾಗಿದೆ. ಕೆಳಗಿನ ಚಿತ್ರದಲ್ಲಿ ಇಬ್ಬರು ಬುರ್ಖಾ ಧರಿಸಿದ್ದಾರೆ. ಈ ಚಿತ್ರ ಬಾಂಗ್ಲಾದೇಶದ ಕಳೆದ 50 ವರ್ಷದ ಚಿತ್ರಣವನ್ನೇ ವಿವರಿಸುತ್ತದೆ. ಜಾತಿ ಜಾತಿಯೆಂದು ಕಚ್ಚಾಡುತ್ತಿದ್ದರೆ 50 ವರ್ಷದ ತರುವಾಯ ಭಾರತದ ಚಿತ್ರವು ಭಿನ್ನವಾಗಿರಲಾರದು" ಎಂದು ಬರೆಯಲಾಗಿದೆ. ಫೋಟೊದಲ್ಲಿ ಫೇಕ್‌ ನ್ಯೂಸ್‌ ಗಳನ್ನು ಹರಡುವ ಪೋಸ್‌ ಕಾರ್ಡ್‌ ಸಂಸ್ಥಾಪಕ ಮಹೇಶ್‌ ವಿಕ್ರಮ್‌ ಹೆಗ್ಡೆಯ ಫೋಟೊ ಮತ್ತು ಹೆಸರನ್ನು ಉಲ್ಲೇಖಿಸಲಾಗಿದೆ.‌

ಈ ಫೋಟೋದ ಕುರಿತಾದಂತೆ Altnews.in‌ ಸತ್ಯಶೋಧನಾ ವರದಿ ಪ್ರಕಟಿಸಿದ್ದು, ಈ ಚಿತ್ರದಲ್ಲಿರುವವರು ಯಾರೂ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದವರಲ್ಲ ಎಂದು ತಿಳಿಸಿದೆ. ಈ ಚಿತ್ರವನ್ನು 2020ರ ಆಗಸ್ಟ್‌ ನಲ್ಲಿ ರೆಹಾನ್‌ ಅಹ್ಮದ್‌ ಎಂಬಾತ ಪ್ರಕಟಿಸಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಈ ಕುರಿತು ರೆಹಾನ್‌ ಅಹ್ಮದ್‌ ರನ್ನು ಸಂಪರ್ಕಿಸಿದಾಗ, ಅದು 1961ರಲ್ಲಿ ತೆಗೆದ ನನ್ನ ಅಜ್ಜಿಯ ಚಿತ್ರವಾಗಿದೆ. ಚಾಲಕನ ಸೀಟಿನ ಪಕ್ಕದಲ್ಲಿ ಕುಳಿತವರು ನನ್ನ ಅಜ್ಜು ರುಖಿಯಾ ಅಹ್ಮದ್‌, ಉಳಿದವರು ಆಯಿಶಾ, ರಶೀದಾ ಅಹ್ಮದ್‌ ಹಾಗೂ ಶಹಾನಾ ಅಹ್ಮದ್‌ ಆಗಿದ್ದಾರೆ. ಅವರು ಫೋಟೊ ತೆಗೆಯುವ ಉದ್ದೇಶದಿಂದ ಮಾತ್ರ ಬಂದೂಕು ಕೈಯಲ್ಲಿ ಹಿಡಿದುಕೊಂಡಿದ್ದರು" ಎಂದು ಹೇಳಿಕೆ ನೀಡಿದ್ದಾರೆ.

"ಆ ಜೀಪ್‌ ಈಗಲೂ ನಮ್ಮ ಮನೆಯಲ್ಲಿದೆ. ನಾವು ಅದನ್ನು ಸಂಗ್ರಹಿಸಿಟ್ಟಿದ್ದೇವೆ. ಆ ಫೋಟೊವನ್ನು ಮತ್ತು ಆ ಸಂದರ್ಭವನ್ನು ಮರುಸೃಷ್ಟಿಸುವ ಸಲುವಾಗಿ ನಾವು 2017ರಲ್ಲಿ ಮತ್ತೊಮ್ಮೆ ಫೋಟೊ ಕ್ಲಿಕ್ಕಿಸಿದ್ದೆವು. ಅವರು ಯಾರೂ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದವರಲ್ಲ. ಅವರು ಜನ್ಮತಃ ಮುಸ್ಲಿಮರೇ ಆಗಿದ್ದಾರೆ. ಉಳಿದವರೆಲ್ಲಾ ನಮ್ಮ ಸಂಬಂಧಿಗಳೇ ಆಗಿದ್ದಾರೆ" ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಪ್ರಕರಣದ ಹಿಂದುಮುಂದು ವಿಚಾರಿಸದೇ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುವ ಹಾಗೂ ಯಾವುದೇ ಪ್ರಕರಣವನ್ನು ಕೋಮುವಾದೀಕರಣಗೊಳಿಸುವ ಪೋಸ್ಟ್‌ ಕಾರ್ಡ್‌ ಮತ್ತು ಅದರ ಸ್ಥಾಪಕ ಮಹೇಶ್‌ ವಿಕ್ರಮ್‌ ಹೆಗ್ಡೆ ಸಾಮಾಜಿಕ ತಾಣದಾದ್ಯಂತ ನಗೆಪಾಟಲಿಗೀಡಾಗಿದ್ದಾರೆ.

Women are posing with gun in a village trip. Bangladesh (1965) Photo courtesy- Renan Ahmed.

Posted by Bangladesh Old Photo Archive on Friday, 19 July 2013
Posted by Mahesh Vikram Hegde on Wednesday, 24 March 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X