ಕೊರೋನ: ವಾಹನಗಳ ದಾಖಲೆ ಸಿಂಧುತ್ವ ಜೂನ್ ವರೆಗೆ ವಿಸ್ತರಿಸಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮಾ. 30: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಾಹನಗಳ ದಾಖಲೆಗಳ ಸಿಂಧುತ್ವವನ್ನು ಸರಕಾರ 2021 ಜೂನ್ ವರೆಗೆ ವಿಸ್ತರಿಸಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ರಾಜ್ಯಗಳಿಗೆ ನೀಡಿದ ಸಲಹೆಯಲ್ಲಿ ಹೇಳಿದೆ.
ಮೋಟಾರು ವಾಹನ ಕಾಯ್ದೆ, 1988 ಹಾಗೂ ಕೇಂದ್ರ ಮೋಟಾರು ವಾಹನ ಕಾಯ್ದೆ, 1989ರ ಅಡಿಯಲ್ಲಿ ಅರ್ಹವಾದ ದಾಖಲೆಗಳ ಅವಧಿಯನ್ನು ವಿಸ್ತರಿಸಲಾಗಿದೆ. ಕೊರೋನ ಲಾಕ್ಡೌನ್ನಿಂದ ನವೀಕರಣಗೊಳ್ಳದ ಹಾಗೂ 2020 ಫೆಬ್ರವರಿ 1ರಿಂದ ಅವಧಿ ಪೂರ್ಣಗೊಂಡ ಅಥವಾ 2021 ಮಾರ್ಚ್ 31ರ ಒಳಗೆ ಅವಧಿ ಪೂರ್ಣಗೊಳ್ಳಲಿರುವ ವಾಹನಗಳ ಸುಸ್ಥಿತಿ, ಪರವಾನಿಗೆ, ಚಾಲನಾ ಪರವಾನಿಗೆ, ನೋಂದಣಿ ಹಾಗೂ ಇತರ ದಾಖಲೆಗಳು ಇದು ಹೊಂದಿದೆ.
Next Story