ಮಂಗಳೂರು: ಮಗುವಿನೊಂದಿಗೆ ವಿವಾಹಿತ ನಾಪತ್ತೆ

ಮಂಗಳೂರು, ಮಾ.31: ನಗರದ ಕದ್ರಿ ಬಳಿಯ ಆಳ್ವಾರೀಸ್ ರಸ್ತೆಯ ಫಾಲ್ಕಾಮ್ ಕ್ರಿಸ್ಟ್ ನಿವಾಸಿ ಅಬ್ದುಲ್ ಹಾಶಿಮ್ (32) ಎಂಬವರು ತನ್ನ 1 4 ತಿಂಗಳು ಹೆಣ್ಣು ಮಗುವಿನೊಂದಿಗೆ ಮಾ.23 ರಂದು ಕಾಣೆಯಾಗಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸುಮಾರು 5.9 ಅಡಿ ಎತ್ತರವಿದ ಹಾಶಿಮ್ ಬಿಳಿ ಮೈಬಣ್ಣ ಮತ್ತು ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಅಗಲ ಮುಖ, ಎಡ ಕೈಯಲ್ಲಿ ಕಪ್ಪುಎಳ್ಳು ಮಚ್ಚೆ ಹೊಂದಿದ್ದು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದ ದಿನದಂದು ಹಳದಿ ಟಿ-ಶರ್ಟ್ ಧರಿಸಿರುತ್ತಾರೆ. ಕಾಣೆಯಾದ ಹೆಣ್ಣು ಮಗು ಬಿಳಿ ಮೈಬಣ್ಣ, ದುಂಡು ಮುಖ, ಹೊಟ್ಟೆಯ ಎಡ ಭಾಗಕ್ಕೆ ಕಪ್ಪುಎಳ್ಳು ಮಚ್ಚೆ ಇದೆ.
ಈ ವ್ಯಕ್ತಿ ಹಾಗೂ ಮಗುವಿನ ಮಾಹಿತಿ ಸಿಕ್ಕರೆ ಕದ್ರಿ ಠಾಣೆ (ದೂ.ಸಂ: 2220520 ಅಥವಾ ಕಂಟ್ರೋಲ್ ರೂಮ್ ಸಂಖ್ಯೆ: 2220800, 2220801)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





