ಮಗಳ ಹೇಳಿಕೆಗಳನ್ನು ಪರಿಗಣಿಸಬೇಡಿ: ಸಂತ್ರಸ್ತ ಯುವತಿಯ ತಂದೆಯಿಂದ ಹೈಕೋರ್ಟ್ ಗೆ ಅರ್ಜಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ಬೆಂಗಳೂರು, ಮಾ.31: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಸ್ವ-ಇಚ್ಛೆ ಹೇಳಿಕೆ ನೀಡಿದ ಬೆನ್ನಲ್ಲೇ ಯುವತಿಯ ತಂದೆ 'ನನ್ನ ಮಗಳ ಹೇಳಿಕೆಯನ್ನು ಪರಿಗಣಿಸಬಾರದು ಹಾಗೂ ಸಿಆರ್‌ಪಿಸಿ 164 ಅಡಿ ದಾಖಲು ಮಾಡಿಕೊಳ್ಳಲಾದ ಹೇಳಿಕೆಗಳನ್ನು ರದ್ದುಪಡಿಸಬೇಕೆಂದು ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
21 ಪುಟಗಳ ಅರ್ಜಿ ಸಲ್ಲಿಸಿರುವ ಸಂತ್ರಸ್ತ ಯುವತಿಯ ತಂದೆ, ಹೈಕೋರ್ಟ್ ಅಂತಿಮ ಆದೇಶದವರೆಗೆ ಸಿಆರ್‌ಪಿಸಿ 164 ಅಡಿ ದಾಖಲಿಸಿರುವ ನನ್ನ ಮಗಳ ಹೇಳಿಕೆಯನ್ನು ಪರಿಗಣಿಸಬಾರದು. ನನ್ನ ಮಗಳು ಒತ್ತಡಕ್ಕೆ ಒಳಗಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಅವಳನ್ನು ಸದ್ಯದ ಮಟ್ಟಿಗೆ ಮಹಿಳಾ ಸ್ವಾಂತನ ಕೇಂದ್ರಗಳಲ್ಲಿ ಇರಿಸಬೇಕು. ಇಲ್ಲವೇ ಸ್ವತಂತ್ರ ಸಂಸ್ಥೆಯ ಸುಪರ್ಧಿಯಲ್ಲಿ ಇಡಬೇಕು. ಅಂದಾಗ ಮಾತ್ರ ನನ್ನ ಮಗಳು ಸ್ವ ಇಚ್ಛೆಯಿಂದ ಹೇಳಿಕೆ ನೀಡಲು ಸಾಧ್ಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
Next Story





