ಉತ್ತರಪ್ರದೇಶ: ಯುವತಿಯ ಅತ್ಯಾಚಾರಗೈದು, ವೀಡಿಯೋ ಚಿತ್ರೀಕರಣ
ಆಗ್ರಾ (ಉತ್ತರಪ್ರದೇಶ), ಮಾ. 31: ಹತ್ತೊಂಬತ್ತು ವರ್ಷದ ಯುವತಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ವೀಡಿಯೊ ಚಿತ್ರೀಕರಣ ನಡೆಸಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಸೋಮವಾರ ಸಂಜೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ದಂಪತಿ ತನ್ನ ಅತ್ತೆ-ಮಾವನ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಸೋಮವಾರ ಸಂಜೆ ಮೂವರು ದುಷ್ಕರ್ಮಿಗಳು ತಡೆದಿದ್ದಾರೆ. ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅವರಲ್ಲಿದ್ದ ವಸ್ತುಗಳನ್ನು ದರೋಡೆಗೈದು ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆಗ್ರಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ ಇಬ್ಬರು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಮೂರನೇ ವ್ಯಕ್ತಿಯ ಹೆಸರು ಉಲ್ಲೇಖಿಸಿಲ್ಲ. ತಾನು ಹಾಗೂ ಪತಿ ಬೈಕ್ನಲ್ಲಿ ಅತ್ತೆ-ಮಾವನ ಮನೆಗೆ ತೆರಳುತ್ತಿದ್ದಾಗ, ಇನ್ನೊಂದು ಬೈಕ್ನಲ್ಲಿ ಆಗಮಿಸಿದ ಮೂವರು ನಮಗೆ ತಡೆ ಒಡ್ಡಿದರು. ಅವರು ತನ್ನನ್ನು ಸಮೀಪದ ಕಾಡಿಗೆ ಎಳೆದೊಯ್ದು ಅತ್ಯಾಚಾರ ನಡೆಸಿದರು. ವೀಡಿಯೊ ಚಿತ್ರೀಕರಣ ಮಾಡಿದರು. ಅಲ್ಲದೆ, ಬೆದರಿಕೆ ಒಡ್ಡಿದರು ಎಂದು ದೂರಿಲ್ಲಿ ಮಹಿಳೆ ಹೇಳಿದ್ದಾರೆ.