ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಉತ್ಪಾದಕರ ಸಂಘ ಅಸ್ತಿತ್ವಕ್ಕೆ
ಉಡುಪಿ, ಮಾ.31: ಉಡುಪಿ- ದಕ್ಷಿಣ ಕನ್ನಡ - ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿಯ 68 ಶುದ್ಧ ಕುಡಿಯುವ ನೀರಿನ ಸರಬರಾಜು ಘಟಕಗಳ ಮುಖ್ಯಸ್ಥರನ್ನು ಒಳಗೊಂಡ ಕೋಸ್ಟಲ್ ಕರ್ನಾಟಕ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರರ್ ಅಸೋಸಿಯೇಶನ್ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದಿದೆ. ಕಾಪುವಿನಲ್ಲಿ ಇತ್ತೀಚೆಗೆ ಕರೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯವೊಂದನ್ನು ತೆಗೆದುಕೊಂಡಿದ್ದು, ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ನೂತನ ಸಂಘದ ಅಧ್ಯಕ್ಷ ರಮೇಶ್ ಬಂಗೇರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾರುಕಟ್ಟೆಯಲ್ಲಿ ಅನಾರೋಗ್ಯಕರ ಕನಿಷ್ಠ ದರ ಪೈಪೋಟಿಯಿಂದ ಉದ್ದಿಮೆದಾರರು ಸಂಕಷ್ಟ ಅನುಭವಿಸುವಂತಾಗಿದೆ.ಅಲ್ಲದೇ ದಿನೇದಿನೆ ಕಚ್ಚಾ ಸಾಮಗ್ರಿದರ ಏರಿಕೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಏಕರೀತಿಯ ಸಗಟು ಹಾಗೂ ಚಿಲ್ಲರೆ ದರ ಪಟ್ಟಿ ಕಡ್ಡಾಯವಾಗಿ ಪಾಲಿಸುವ ನಿರ್ಧಾರಕ್ಕೆ ಬರಲಾಗಿದೆ. ಪರಿಷ್ಕೃತ ದರ ಏ.1ರಿಂದ ಜಾರಿಯಾಗಲಿದ್ದು, ಸದ್ಯಕ್ಕೆ ಎಂಆರ್‌ಪಿ ದರದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಆನಂದ ಶೆಟ್ಟಿ, ಕಾರ್ಯದರ್ಶಿ ಸುಹಾಸ್ ಭಂಡಾರ್ಕರ್ ಕುಂದಾಪುರ ಉಪಸ್ಥಿತರಿದ್ದರು.
ಪದಾಧಿಕಾರಿಗಳು: ಅಧ್ಯಕ್ಷರು-ರಮೇಶ್ ಎ.ಬಂಗೇರ, ಪ್ರಧಾನ ಕಾರ್ಯದರ್ಶಿ- ಸುಹಾಸ್ ಭಂಡಾರ್ಕರ್, ಸಂಘಟನಾ ಕಾರ್ಯದರ್ಶಿ-ಆನಂದ ಶೆಟ್ಟಿ, ಖಜಾಂಚಿ- ಇಸ್ಮಾಯಿಲ್ ಮೊಯ್ದಿನ್, ಉತ್ತರ ಕನ್ನಡ ಜಿಲ್ಲೆಯ ಉಪಾಧ್ಯಕ್ಷ ಸುರೇಶ್ ನಾಯ್ಕಿ, ಕಾರ್ಯದರ್ಶಿ ನಾಗಪ್ರಸಾದ್ ನಾಯಕ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಸುಧಾಕರ ಕೊಠಾರಿ, ದ.ಕ. ಜಿಲ್ಲೆ ಉಪಾಧ್ಯಕ್ಷ ಶಶಿಧರ ಭಟ್, ಕಾರ್ಯದರ್ಶಿ ಗಿರೀಶ್ ಭಂಡಾರಿ, ಕಾನೂನು ಸಲಹೆಗಾರ ಗಿರೀಶ್ಚಂದ್ರ ಉಡುಪಿ.







